



ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ 11 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಯಶ್ ಶರ್ಮಾ(19), ಪ್ರಥಮೇಶ್ ಬಿ. ಪೈ (20), ರೋಹನ್ ಖ್ಯಾನಿ (20), ಯಶ್ ಮಯೂರ್ ದೋಶಿ (20), ಯಶ್ ಇಶ್ರಿತ್ ತಿನ್ಡೇವಾಲ್ (20), ಕೊಮ್ಮುರಿ ಸಿದ್ದಿ ಸುಹಾಸ್ (20), ಪ್ರನೀತ್ ನರಪರಾಜು (21), ಏಕಾನ್ಷ್ ರೋಹಿತ್ ಅಗರ್‍ವಾಲ್ (21), ಆದರ್ಶ್ ಮೋಹನ್ (21), ವೇದಾಂತ್ ಶೆಟ್ಟಿ (20) ಹಾಗೂ ಷಬ್‍ಜೋತ್ ಸಂಧು (21) ಎಂಬವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯಕೀಯ ವರದಿಯಲ್ಲಿ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.