logo
WhatsApp Image 2026-04-02 at 14.46.04.jpeg
hindalco everlast.jpeg

ಶಿವಪುರದಲ್ಲಿ ನೇಣು ಬಿಗಿದುಕೊಂಡು ವಿವಾಹಿತ ಆತ್ಮಹತ್ಯೆ

ಟ್ರೆಂಡಿಂಗ್
share whatsappshare facebookshare telegram
28 Jul 2023
post image

ಹೆಬ್ರಿ: ಜೀವನದಲ್ಲಿ ಮನನೊಂದ ವಿವಾಹಿತನೋರ್ವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಹಾಡಿಯಲ್ಲಿ ನಡೆದಿದೆ.

ಹೆಬ್ರಿ ಶಿವಪುರ ನಿವಾಸಿ ರಂಗನಾಥ್ ಶೆಟ್ಟಿ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಹಿರಿಯಡ್ಕ ಸೌಹಾರ್ದ ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಯಾವುದೋ ವಿಚಾರಕ್ಕೆ ಸಂಬಂಧಿಸಿ ಮನನೊಂದಿದ್ದು, ಯಾರ ಬಳಿಯೂ‌ ಹೇಳಿಕೊಂಡಿರಲಿಲ್ಲ. ಇದೇ ವಿಚಾರದಲ್ಲಿ ಮನನೊಂದು ಶಿವಪುರ ಗ್ರಾಮದ ಮೇಲ್ಮುಕ್ಕಾಣಿ ಹಾಡಿಯಲ್ಲಿರುವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.