



ಟೆಕ್ಸಾಸ್: ಬಂದೂಕುಧಾರಿ 18ರ ಹರೆಯದ
ತರುಣನೊಬ್ಬ ಇಲ್ಲಿನ ಪ್ರಾಥಮಿಕ ಶಾಲೆಯೊಂದಕ್ಕೆ ನುಗ್ಗಿ ಯದ್ವಾತದ್ವಾ ಗುಂಡಿನ ದಾಳಿ
ನಡೆಸಿದ ಪರಿಣಾಮ 18 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ.
ಈ ಹತ್ಯಾಕಾಂಡ ನಡೆಸಿದ ತರುಣನನ್ನು
ಸಾಲ್ವಡಾರ್ ರಾಮೋಸ್ ಎಂದು ಗುರುತಿಸಲಾಗಿದ್ದು, ನಂತರ ಪೊಲೀಸರು ಆತನನ್ನು ಗುಂಡಿಟ್ಟು ಸಾಯಿಸಿದ್ದಾರೆ.
ಟೆಕ್ಸಾಸ್‌ನ ರಾಬ್ ಪ್ರಾಥಮಿಕ ಶಾಲೆಯಲ್ಲಿ ಈ ರಕ್ತಪಾತ ನಡೆದಿದೆ.18 ಮಕ್ಕಳು ಮತ್ತು 3 ವಯಸ್ಕರನ್ನು ಸಾಲ್ವಾಡಾರ್ ರಾಮೋಸ್ ಬಂದೂಕಿನಲ್ಲಿ ಹೊಸಕಿ ಹಾಕಿದ್ದಾನೆ. ರಾಬ್ ಸ್ಕೂಲ್ ನಲ್ಲಿ 600 ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ ಗುಂಡಿನ ದಾಳಿಗೆ ಬಲಿಯಾಗಿರುವ ಮಕ್ಕಳ ವಯಸ್ಸು ಎಷ್ಟು ಅನ್ನೋದು ತಿಳಿದು ಬಂದಿಲ್ಲ. ಒಂದು ವಾರ ಕಳೆದಿದ್ದರೆ ಮಕ್ಕಳಿಗೆ ಬೇಸಿಗೆ ರಜೆಯನ್ನು ನೀಡಲಾಗುತ್ತಿತ್ತು. ಆದರೆ ಅದೃಷ್ಟವಶಾತ್ ದುರಂತರ ಸಂಭವಿಸಿದೆ.
ಈ ಕುರಿತು ಅಮೆರಿಕ ಅಧ್ಯಕ್ಷ ಜೋ ಬಿಡೆನ್
ವಿಷಾದ ವ್ಯಕ್ತಪಡಿಸಿದ್ದಾರೆ. ಟೆಕ್ಸಾಸ್‌ನಲ್ಲಿ ಮೃತರ
ಗೌರವಾರ್ಥ ಸೂರ್ಯಾಸ್ತದ ಮೂಲಕ ಅಮೆರಿಕದ ಧ್ವಜಗಳನ್ನು ಅರ್ಧ ಹಾರಿಸುವ ಮೂಲಕ ಶೋಕಾಚರಣೆ ಆಚರಿಸುವಂತೆ ಕರೆ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.