



ಗೋಮಾ( ಕಾಂಗೋ):ಪೂರ್ವ ಕಾಂಗೋದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ.
ಗೋಮಾದ ಮಸಿಸಿ ಪ್ರಾಂತ್ಯದ ಬೊಲೊವಾ ಗ್ರಾಮದಲ್ಲಿ ಭಾನುವಾರ ಭೂಕುಸಿತ ಸಂಭವಿಸಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಗುಯಿಲೌಮ್ ಎನ್ಡ್ಜಿಕೆ ಕೈಕೊ ಸೋಮವಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದುರಂತ ವೇಳೆ ಸುಮಾರು 25 ತಾಯಂದಿರು ತಮ್ಮ ಮಕ್ಕಳೊಂದಿಗೆ ಪರ್ವತದ ತಪ್ಪಲಿನಲ್ಲಿರುವ ಹೊಳೆಯಲ್ಲಿ ಬಟ್ಟೆ ಒಗೆಯುತ್ತಿದ್ದರು. ಹೀಗಾಗಿ ಭಾರೀ ಭೂಕುಸಿತದಲ್ಲಿ ಅವರೆಲ್ಲ ಇದ್ದಕ್ಕಿದ್ದಂತೆ ಸಮಾಧಿಯಾಗಿದ್ದಾರೆ.
ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳಿಗಾಗಿ ಪೂರ್ವ ಕಾಂಗೋವು 120 ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳೊಂದಿಗೆ ನಿರಂತರ ಹೋರಾಟ ನಡೆಸುತ್ತಿದೆ. ಈ ಸಂಘರ್ಷದಲ್ಲಿ ಕೆಲ ಸಶಸ್ತ್ರ ಗುಂಪುಗಳು ತಮ್ಮ ಸಮುದಾಯಗಳನ್ನು ರಕ್ಷಿಸಲು ಹೋರಾಟ ಮಾಡುತ್ತಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಮಸಿಸಿ ಪ್ರಾಂತ್ಯದ ಬಿಹಾಂಬ್ವೆ ಗ್ರಾಮದಲ್ಲಿ ಭೂಕುಸಿತದಿಂದ ಸುಮಾರು 100 ಜನರು ಸಾವನ್ನಪ್ಪಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.