



ಉಡುಪಿ: ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಶಾಂತಿಧಾಮ ಪೂರ್ವ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ ಕೋಟೇಶ್ವರ ಜಂಟಿ ಆಶ್ರಯದಲ್ಲಿ ಗಣಿತ ವಿಷಯ ಕಾರ್ಯಾಗಾರ ನಡೆಯಿತು.
ಅಧ್ಯಕ್ಷರು ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರ ಶ್ರೀ ಕೃಷ್ಣ ರಾಯ ಶಾನುಭಾಗ್ ಕುಂದಾಪುರ ಇವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಶಿಕ್ಷಕ ವೃತ್ತಿಯಲ್ಲಿ ತರಬೇತಿಯೂ ಅತಿ ಮುಖ್ಯವಾಗಿದೆ.ನಿರಂತರವಾಗಿ ವಿದ್ಯಾರ್ಥಿಗಳು ಬದಲಾಗುತ್ತಾರೆ.ಅದರಂತೆ ನಾವು ಬದಲಾಗಬೇಕು..ಎಂದು ಶ್ರೀ ಕೃಷ್ಣ ರಾಯು ಶಾನುಭಾಗ್ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದರು.
ಗಣಿತ ತರಬೇತಿದಾರರಾಗಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಸರಕಾರಿ ಪ್ರೌಢಶಾಲೆ ಕಾಳಾವರ ಗಣಿತ ಶಿಕ್ಷಕರು ಶ್ರೀ ಗಣೇಶ ಶೆಟ್ಟಿಗಾರ್ ದೀಪ ಬೆಳಗಿಸುವುದರೊಂದಿಗೆ ತರಬೇತಿಗೆ ಚಾಲನೆ ನೀಡಿದರು.
ಅಧ್ಯಕ್ಷರು, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶ್ರೀ. ಪಾಂಡುರಂಗ ಪೈ ಸಿದ್ದಾಪುರ, ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶ್ರೀ ಮಹೇಶ ಹೈಕಾಡಿ, ಜಿಲ್ಲಾ ಗಣಿತ ಪ್ರಮುಖ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶ್ರೀಮತಿ ಜ್ಯೋತಿ ಉಪಸ್ಥಿತರಿದ್ದರು.ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆ ಗಳಲ್ಲಿ ಹದಿಮೂರು ಸಂಸ್ಥೆಗಳ 25ಗುರೂಜಿ ಮಾತಾಜಿಯವರು ತರಬೇತಿಯ ಪ್ರಯೋಜನವನ್ನು ಪಡೆದರು.ಪ್ರಾಸ್ತಾವಿಕ ಶ್ರೀ ಮಹೇಶ ಹೈಕಾಡಿ , ನಿರೂಪಣೆ ಶ್ರೀಮತಿ ಅಮೃತ , ಧನ್ಯವಾದ ಶ್ರೀಮತಿ ನಾಗರತ್ನ ಉಡುಪ ಮಾಡಿದರು.ಸಮಾರೋಪದಲ್ಲಿ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಇವರು ತರಬೇತುದಾರರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.