



ಕಾರ್ಕಳ: ಕಳೆದ 2 ವರ್ಷಗಳಿಂದ ರೈತರ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ.ಕೊರೊನಾ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹಣ್ಣು ಹಂಪಲು ಮಾರಾಟ ಮಾಡಲಾಗದೆ ಕೊಳತು ಬೀದಿ ಬದಿ ಸುರಿಯುವಂತಾಗಿದೆ.ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಈ ವರ್ಷ ಪುನಃ ಸಾಲ ಮಾಡಿ ಪುನಃ ಬೆಳೆದು ಪಸಲಿಗೆ ಸರಿಯಾದ ಬೆಂಬಲ ಬೆಲೆ ಇಲ್ಲ.ಅತಿವ್ರಷ್ಡಿ ಮತ್ತು ಅನಾವ್ರಷ್ಠಿಯಿಂದ ತೊಂದರೆ ಒಳಗಾಗಿ ಸಂಕಷ್ಟ ಅನುಭವಿಸಿದವ ರೈತರನ್ನು ಕೇಳುವವರೇ ಇಲ್ಲ.ಕಾಂಗ್ರೆಸ್ ಸರ್ಕಾರ ಇದ್ದಾಗ ತಂದ ರೈತ ಪರ ಕಾನೂನನ್ನು ಬಿಜೆಪಿ ಸರಕಾರ ತಿದ್ದುಪಡಿ ತಂದು ರೈತರ ಜಮೀನು ಮತ್ತು ಮಾರಾಟದ ಹಕ್ಕನ್ನು ಮೊಟಕುಗೊಳಿಸಿ ಸರ್ಕಾರ ಬಹುರಾಷ್ಟ್ರೀಯ ಕಂಪೆಗಳ ಪರ ನಿಂತಿರುವುದು ಈದೇಶದ ಬಹಳ ದೊಡ್ಡ ದುರಂತ ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಆರೋಪಿಸಿದರು ರೈತ ತನಗೆ ನ್ಯಾಯ ಸಿಗುತ್ತಿಲ್ಲ ಎಂದು ಮನವಿ, ಪ್ರತಿಭಟನೆ ಮಾಡಿ ತನ್ನ ಅಮೂಲ್ಯ ಬದುಕು ಕಳೆದುಕೊಂಡು ಲಕ್ಷಾಂತರ ರೈತರು ಆತ್ಮಹತ್ಯೆ ಹಾದಿ ಹಿಡಿದಿರುವುದು ಜನಪ್ರತಿನಿಧಿಗಳ ಅಮಾನವೀಯ ವರ್ತನೆ ಪ್ರಜಾತಂತ್ರ ವ್ಯವಸ್ಥೆಗೆ ಮಾಡಿರುವ ಧ್ರೋಹ ಎಂದರು ಭತ್ತ, ಅಡಿಕೆ, ತೆಂಗು ಕರಾವಳಿ ಕರ್ನಾಟಕದ ಸಂಪ್ರದಾಯಿಕ ಬೆಳೆಗಳು .ಆದರೆ ಸಚಿವ ಸುನೀಲ್ ಕುಮಾರ್ ಕಜೆ ಅಕ್ಕಿ ,ಬಿಳಿ ಬೆಂಡಬಗ್ಗೆ ಪ್ರಚಾರ ಕ್ಕಿಳಿದ್ದಾರೆ .ಈಗ ಕಜೆ ಅಕ್ಕಿ ಭತ್ತ ಮಳೆಯಿಂದ ಕೊಚ್ಚಿ ಹೋಗಿದೆ. ಬೆಂಡೆ ಗಿಡ ಕೊಳೆಯುತ್ತಿದೆ. ಭತ್ತದ ಫಸಲು ಕಟಾವು ಯಂತ್ರದ ದುಬಾರಿ ಬಾಡಿಗೆ ಜೊತೆಗೆ ವ್ಯವಸ್ಥಿತ ರೀತಿಯ ಕಟಾವು ಮಾಡಲು ಕಟಾವು ಯಂತ್ರ ದೊರಕದೆ ಮಳೆಯಿಂದ ಬೆಳೆ ನಾಶವಾಗಿವೆ ಎಂದ ಅವರು ಬೆಳೆಗಳಿಗೆ ಕಾಡು ಪ್ರಾಣಿಗಳು, ಮಂಗ,ನವಿಲು ಗಳ ಕಾಟ.ಜಿಲ್ಲಾಧಿಕಾರಿ ಗಳಿಂದ ಮೊದಲ್ಗೊಂಡು ಎಲ್ಲರೂ ಗೋವಿನ ಪೂಜೆ,ಪುರಸ್ಕಾರ ದಲ್ಲಿ ತೊಡಗಿದ್ದಾರೆ. ಆ ಗೋವಿನ ಹುಲ್ಲು, ಹಿಂಡಿಯ ಸಾಮಾಗ್ರಿಗಳು ರೈತನ ಬೆಳೆ ಸರಿಯಾದ ರೀತಿಯಲ್ಲಿ ಆದರೆ ಮಾತ್ರ ಗೋವಿಗೆ ಮೇವು ದೊರಕುವುದು. ಸರಕಾರದ ಸಚಿವರುಗಳಾದ ಸುನೀಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅರಿತು ನಷ್ಟ ಹೊಂದಿರುವ ರೈತರಿಗೆ ತುರ್ತು ಪರಿಹಾರ ಘೋಷಣೆ ಮಾಡಿ,ಕಾಡು ಪ್ರಾಣಿಗಳ ನಿರಂತರ ಹಾನಿಯನ್ನು ತಡೆಯುವಲ್ಲಿ ಸರ್ಕಾರ ತುರ್ತು ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.