


ಈ ವರ್ಷದ ಕ್ರಿಸ್ಮಸ್ ಸಂದರ್ಭದಲ್ಲಿ ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ತಮಿಳಿನಲ್ಲಿ ಸಿನಿಮಾಗಳು ರಿಲೀಸ್ ಆದವು. ಈ ಪೈಕಿ ಕನ್ನಡದಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಕಂಡಿವೆ. ಅದುವೇ ‘ಯುಐ’ ಹಾಗೂ ‘ಮ್ಯಾಕ್ಸ್’ ಸಿನಿಮಾ. ಈ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿವೆ. ಇನ್ನು ಹಿಂದಿಯ ‘ಬೇಬಿ ಜಾನ್’ ಸಿನಿಮಾ ಮಂಕಾಗಿದೆ. ಕ್ರಿಸ್ಮಸ್ನ ರಿಯಲ್ ವಿನ್ನರ್ ಆಗಿ ‘ಮ್ಯಾಕ್ಸ್’ ಚಿತ್ರ ಹೊರಹೊಮ್ಮಿದೆ. ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಬೀಗುತ್ತಿದೆ.
ಸದ್ಯ ಉಪೇಂದ್ರ ನಟನೆಯ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 10ನೇ ದಿನ ಅಂದರೆ ಭಾನುವಾರ ಕೇವಲ 1.15 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 29.45 ಕೋಟಿ ರೂಪಾಯಿ ಆಗಿದೆ. ‘ಮ್ಯಾಕ್ಸ್’ ಸಿನಿಮಾ ಭಾನುವಾರ ಭರ್ಜರಿ ಗಳಿಕೆ ಮಾಡಿದೆ. ಈ ಚಿತ್ರ ಕೇವಲ ಐದು ದಿನಕ್ಕೆ ಸುಮಾರು 28 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ‘ಯುಐ’ ಚಿತ್ರ ಹಿಂದಿಕ್ಕಲು ‘ಮ್ಯಾಕ್ಸ್’ಗೆ ಬೇಕಿರೋದು ಕೆಲವೇ ಕೋಟಿ ರೂಪಾಯಿ ಮಾತ್ರ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.