



ಕಾರ್ಕಳ: ರಾಷ್ಟ್ರೀಯ ಹಲಸು ಮೇಳ ಹಾಗೂ ನಿಟ್ಟೆ ಗ್ರಾಮೋತ್ಸವ ಕಾರ್ಯಕ್ರಮ ಮೇ 20ರಿಮದ 22ರ ತನಕ ನಿಟ್ಟೆ ಸಂಸ್ಥೆಯ ಆವರಣದಲ್ಲಿ ವಿವಿಧ ರೂಪದಲ್ಲಿ ನಡೆಯಲಿದೆ ಎಂದು ಸುಫಲ ರೈತ ಉತ್ಪಾದಕ ಕಂಪೆನಿ ಆಡಳಿತ ನಿರ್ದೇಶಕ ನವೀನ್ ನಾಯಕ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಆಹಾರ ಭದ್ರತೆ, ಉದ್ಯೋಗದ ಸೃಷ್ಟಿ, ಬೆಂಬಲ ಬೆಲೆ, ಸಂಶೋಧನೆಗಳಿಗಾಗಿ ಹಲಸು ಮೇಳ ನಡೆಯುತ್ತಿದೆ. ಅಟಲ್ ಇಂಕ್ಯುಬೇಷನ್ ನಿಟ್ಟೆ, ಸುಫಲ ರೈತ ಉತ್ಪಾದಕ ಕಂಪೆನಿ ಆಶ್ರಯದಲ್ಲಿ ನಿಟ್ಟೆ ಗ್ರಾ.ಪಂ, ಸಂಜೀವಿನಿ ಸ್ವಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ಪಡೆದು ನಡೆಸಲಾಗುತ್ತಿದೆ. ಹಲಸಿನ ಬೆಳೆ, ವಿವಿಧ ತಳಿಗಳ ಕೃಷಿ, ಮೌಲ್ಯಾಧಾರಿತ ಉತ್ಪನ್ನಗಳ ತಯಾರಿ, ಸಂಸ್ಕರಣೆ, ಮಾರಾಟ, ಪ್ರಚಾರಗಳಲ್ಲಿ ತೊಡಗಿರುವ ರೈತರು, ಉದ್ಯಮಿಗಳು, ಸಂಶೋ‘ಕರು ವಿಜ್ಞಾನಿಗಳು, ಚಿಂತಕರು ಮಾರಾಟಗಾರರು, ವಿದ್ಯಾರ್ಥಿಗಳು ಹಾಗೂ ಗ್ರಾಾಹಕರನ್ನು ಬೆಸೆಯುವ ನಿಟ್ಟಿನಲ್ಲಿ ಹಲಸು ಮೇಳ ನಡೆಯಲಿದೆ.
ಹಲಸಿನಲ್ಲಿರುವ ಆರೋಗ್ಯ ಮತ್ತು ಪೋಷಕಾಂಶಗಳು, ವಿಶೇಷ ತಳಿಗಳ ಸಂರಕ್ಷಣೆ, ಹಲಸಿನ ಸಂಸ್ಕರಣೆ, ಹಲಸಿನ ಮೌಲ್ಯವಜರ್ನೆಯಲ್ಲಿ ಯಶಸ್ಸು ಕಂಡವರ ಕಥೆ ಹಾಗೂ ಹಲಸಿನ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಸಾದ್ಯತೆಗಳ ಕುರಿತು ವಿಶೇಷ ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳು ರಾಷ್ಟ್ರೀಯ ಹಲಸು ಮೇಳದಲ್ಲಿ ನಡೆಯಲಿದೆ ಎಂದರು. ಹಲಸಿನ ವಿವಿಧ ಆಹಾರ ಉತ್ಪನ್ನಗಳು, ಮೌಲ್ಯವಜರ್ನೆಯ ಪ್ರಯೋಗಗಳು, ಯಂತ್ರೋಪಕರಣಗಳ ಮಳಿಗೆಗಳು ಪ್ರದರ್ಶನದಲ್ಲಿ ಇರಲಿವೆ. ನಿಟ್ಟೆ ಗ್ರಾಾಮ ಪಂಚಾಯತ್ ಸಹಯೋಗದಲ್ಲಿ ಗ್ರಾಾಮೋತ್ಸವ ಕೂಡ ನಡೆಯಲಿದೆ. ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.ನಿಟ್ಟೆ ಗ್ರಾಾ.ಪಂ ಉಪಾದ್ಯಕ್ಷೆ ಸುಮಿತ್ರ ಆಚಾರ್ಯ, ಎಐಸಿ ನಿಟ್ಟೆಯ ಪ್ರವೀಣ್ ಜಾ‘ವ್, ಪುನೀತ್ ರೈ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.