logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಎಂ.ಸಿ.ಸಿ. ಬ್ಯಾಂಕ್ ‘ಮೈಲಿಗಲ್ಲು’ ಸಂಭ್ರಮಾಚರಣೆ

ಟ್ರೆಂಡಿಂಗ್
share whatsappshare facebookshare telegram
21 Jan 2024
post image

ಮಂಗಳೂರು: 1912 ರಲ್ಲಿ ಕ್ರೈಸ್ತ ಸಮಾಜದ ಅದ್ವಿತೀಯ ಸಮಾಜಮುಖಿ ಧುರೀಣ ಪಿ.ಎಫ್.ಎಕ್ಸ್ ಸಲ್ಡಾನ್ಹಾ ಇವರ ನೇತೃತ್ವದಲ್ಲಿ ಹತ್ತು ಸಾವಿರ ರೂಪಾಯಿ ಬಂಡವಾಳದೊಂದಿಗೆ ಸೊಸೈಟಿಯಾಗಿ ಆರಂಭಗೊಂಡ ಎಮ್.ಸಿ.ಸಿ. ಬ್ಯಾಂಕ್ ಇಂದು ಸಾವಿರ ಕೋಟಿ ರುಪಾಯಿ ವಹಿವಾಟಿನ ಸಹಕಾರಿ ಕ್ಷೇತ್ರದ ಅಗ್ರಮಾನ್ಯ ಬ್ಯಾಂಕಾಗಿ ಅಭಿವೃದ್ದಿಯ ಪಥದಲ್ಲಿ ಮುನ್ನುಗ್ಗುತ್ತಿದೆ. ಬ್ಯಾಂಕಿನ ಪ್ರಸ್ತುತ ಆಧ್ಯಕ್ಶ ಶ್ರಿ ಅನಿಲ್ ಲೋಬೊ ನ್ಟೇತೃತ್ವದ ಆಡಳಿತ ಮಂಡಲಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಮೇಲೆ, ಬ್ಯಾಂಕಿನ ಸರ್ವಾಂಗೀಣ ಪ್ರಗತಿ ಇಮ್ಮಡಿಯಾಗಿದೆ. 2018 ರಲ್ಲಿ ಬರೀ 503 ಕೋಟಿ ರುಪಾಯಿ ಇದ್ದ ಬ್ಯಾಂಕಿನ ವ್ಯವಹಾರ ಐದೇ ವರ್ಷದ ಅವಧಿಯಲ್ಲಿ 1000 ಕೋಟಿ ರುಪಾಯಿ ದಾಟಿರುವುದೇ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಸಾಕ್ಷಿ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿಯ ಪ್ರಮುಖ ಸಾಧನೆಗಳು :

■ ಬ್ಯಾಂಕಿನ ಅರ್ಥಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 1.37 ಶೇಕಡಾಕ್ಕೆ ಎನ್.ಪಿ.ಎ. ಇಳಿಸಿ ನಿವ್ವಳ ಲಾಭ 10.38 ಕೋಟಿ ದಾಕಲಿಸಿದ್ದು. ■ 2002 ರಲ್ಲಿ ಕೇವಲ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ 16 ಶಾಖೆಗಳಿಗೆ ಸ್ಥಗಿತಗೊಂಡಿದ್ದ, ಬ್ಯಾಂಕಿನ ವಿಸ್ತರಣೆಯನ್ನು ಸಪ್ತ ಜಿಲ್ಲೆಗಳಿಗೆ ( ದ. ಕ. & ಉಡುಪಿ ಜೊತೆಗೆ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು) ವಿಸ್ತರಿಸಿದ್ದು. ■ ಪ್ರತ್ಯೇಕ ಘಟಕ ನಿರ್ಮಾಣ, ಸಹಮಿಲನ, ಸಮಾವೇಶ ಮುಂತಾದ ವಿಶೇಷ ಕಾರ್ಯಕ್ರಮಗಳ ಮೂಲಕ ಅನಿವಾಸಿ ಭಾರತೀಯ ಖಾತೆಗಳಿಗೆ ಚುರುಕು ಮುಟ್ಟಿಸಿ, ಕರಾವಳಿಯ ಸಹಕಾರಿ ರಂಗದ ಬ್ಯಾಂಕುಗಳಲ್ಲಿ ಅನಿವಾಸಿ ಭಾರತೀಯರಿಗೆ ಸೇವೆ ಒದಗಿಸುತ್ತಿರುವ ಏಕೈಕ ಬ್ಯಾಂಕ್ – ಎಂಸಿಸಿ. ಬ್ಯಾಂಕ್ ಎಂಬ ಮನ್ನಣೆ ದೊರಕಿಸಿ ಕೊಟ್ಟದ್ದು. ■ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಿಗೆ ಸಹಕಾರಿ ರತ್ನ ಪ್ರಶಸ್ತಿಯ ಹಿರಿಮೆಗೆ ಪಾತ್ರವಾಗಿಸಿದ್ದು.
2018 ರಲ್ಲಿ ಕೇವಲ 503 ಕೋಟಿ ರುಪಾಯಿ ಇದ್ದ ವ್ಯವಹಾರ 1000 ಕೋಟಿಗೆ ತಲಪಿಸಿದ್ದು.

1000 ಕೋಟಿ ವ್ಯವಹಾರ ಬ್ಯಾಂಕಿನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಆಗಿರುವುದರಿಂದ ದಿನಾಂಕ 21 ಜನವರಿ 2024 ರಂದು MILESTONE ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರಂಭಕ್ಕೆ ಅನಿವಾಸಿ ಉದ್ಯಮಿ, ಸಮಾಜಸೇವಕ ಮತ್ತು ಮಹಾದಾನಿ ಶ್ರೀ ಮೈಕಲ್ ಡಿ ಸೊಜಾ ಮುಖ್ಯ ಅತಿಥಿಯಾಗಿ ಆಗಮಿಸುವರು. ಹಿರಿಯ ಲೆಕ್ಕ ಪರಿಷೋಧಕ ರುಡೋಲ್ಫ್ ರೊಡ್ರಿಗಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಿಲಾಗ್ರಿಸ್ ಚರ್ಚಿನ ಪ್ರಧಾನ ಗುರು ವಂ। ಬೊನವೆಂಚರ್ ನಜ್ರೆತ್, ಮಾಜಿ ವಿದಾನ ಸಭಾ ಸದಸ್ಯ ಶ್ರೀ ಜೆ. ಆರ್. ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ ಸೊಜಾ, ಖ್ಯಾತ ಉದ್ಯಮಿ ಶ್ರೀ ರೋಹನ್ ಮೊಂತೇರೊ, ಸಮಾಜಮುಖಿ ನಾಯಕ ಶ್ರೀ ಪಿಯುಸ್ ಎಲ್. ರೊಡ್ರಿಗಸ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ.

ಮೈಲಿಗಲ್ಲು ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿ ಪಾಲನೆಯ ಭಾಗವಾಗಿ - ಶಿಕ್ಷಣದಿಂದ ವಂಚಿತರಾದ ಮಕ್ಕಳು, ಹಿರಿಯ ನಾಗರಿಕರು, ಪೋಷಕರು ಇಲ್ಲದ ಮಕ್ಕಳು ಮುಂತಾದ ಅಶಕ್ತರನ್ನು ಆರೈಕೆ ಮಾಡುವ ಸಂಘ ಸಂಸ್ಥೆಗಳಾದ ಉಡುಪಿ ಪಾಂಬೂರಿನ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಸುರಕ್ಷ ಚಾರಿಟೇಬಲ್ ಟ್ರಸ್ಟ್, ಕಾರ್ಕಳ, ಪ್ರಜ್ಞ ಚಿಣ್ಣರ ತಂಗುದಾಮ ಕೇಂದ್ರ, ಕಾಪಿಕಾಡ್, ಮಂಗಳೂರು ಇವರಿಗೆ ದೇಣಿಗೆಯನ್ನು ನೀಡಲಾಗುವುದು. ಹಾಗೂ ಭವಿಷ್ಯದ ಯೋಜನೆಗಳಾದ ಇ-ಲಾಬಿ, ಪಾಸ್ ಬುಕ್ ಕಿಯೋಸ್ಕ್, Personalized Cheque Book, ಮೈಲಿಗಲ್ಲು ಸಾಧನೆಯ ವಿಶೇಷ ಕೊಡುಗೆಗಳನ್ನು ಅನಾವರಣ ಮಾಡಲಾಗುವುದು. ಬ್ಯಾಂಕಿನ ಬುಲೆಟಿನ್ ನಾಲ್ಕನೇ ಸಂಚಿಕೆಯನ್ನೂ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಬ್ಯಾಂಕಿನ ಗ್ರಾಹಕರ ಶುಭದಿನಗಳ ಆಚರಣೆ, ಪ್ರಶಸ್ತಿ ಪುರಸ್ಕಾರ ಪಡೆದವರನ್ನು ಗುರುತಿಸಿ ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಇವರನ್ನು ಸನ್ಮಾನಿಸಲಾಗುವುದು. ಲಘು ಸಂಗೀತ ಮತ್ತು ಸಹಬೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.