logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಎಂ.ಸಿ.ಸಿ. ಬ್ಯಾಂಕಿನ 21ನೇ ಶಾಖೆ ಹಾಗೂ 13ನೇ ಎಟಿಎಮ್ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಉದ್ಘಾಟನೆ.

ಟ್ರೆಂಡಿಂಗ್
share whatsappshare facebookshare telegram
6 Oct 2025
post image

ಉಡುಪಿ: ಎಂ.ಸಿ.ಸಿ. ಬ್ಯಾಂಕಿನ 21ನೇ ಶಾಖೆ ಮತ್ತು 13ನೇ ಎಟಿಎಮ್ ಅನ್ನು ಉಡುಪಿಯ ಕಲ್ಯಾಣಪುರ-ಸಂತೆಕಟ್ಟೆಯಲ್ಲಿ ಅ.5 ರಂದು ಜೆಎಸ್ ಸ್ಕೇರ್ನ ನೆಲಮಹಡಿಯಲ್ಲಿ ಉದ್ಘಾಟಿಸಲಾಯಿತು. ನೂತನ ಶಾಖೆಯನ್ನು ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಉದ್ಘಾಟಿಸಿದರು.

ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ನ ಧರ್ಮಗುರು ರೆ.ಡಾ.ರೋಕ್ ಡಿಸೋಜ ನೂತನ ಶಾಖೆಯನ್ನು ಆಶೀರ್ವಚಿಸಿದರು. ಉಡುಪಿ ಧರ್ಮಪ್ರಾಂತ್ಯದ ಪಿಆರ್ಒ ಮತ್ತು ತೊಟ್ಟಂ ಚರ್ಚ್ನ ಧರ್ಮಗುರು ರೆ.ಫಾ.ಡೆನಿಸ್ ಡೆಸಾ ಅವರು ಎಟಿಎಂ ಅನ್ನು ಉದ್ಘಾಟಿಸಿದರು. ಕಲ್ಯಾಣಪುರ-ಸಂತೆಕಟ್ಟೆ ಕರಾವಳಿ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಅವರು ಎಟಿಎಂನಿಂದ ಮೊದಲ ಹಣ ಹಿಂಪಡೆದರು. ಸೇಫ್ ರೂಮ್ ಅನ್ನು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತೀ ವಂ. ಮೊ| ಫರ್ಡಿನಾಂಡ್ ಗೊನ್ಸಾಲ್ವಿಸ್ ಮತ್ತು ಇ-ಸ್ಟಾಂಪಿಂಗ್ ಸೌಲಭ್ಯವನ್ನು ಸುಬ್ರಹ್ಮಣ್ಯ ನಗರದ ಸೇಂಟ್ ಪಾಲ್ ಚರ್ಚ್ನ ಸಭಾಪಾಲಕರು ರೆವೆರೆಂಡ್ ಕಿಶೋರ್ ಕುಮಾರ್ ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು. ಸಮಾರಂಭದಲ್ಲಿ ಉಡುಪಿ ವಿಧಾನಸಭಾ ಶಾಸಕರಾದ ಯಶಪಾಲ್ ಸುವರ್ಣ ಮತ್ತು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತೀ ವಂ. ಮೊ| ಫರ್ಡಿನಾಂಡ್ ಗೊನ್ಸಾಲ್ವಿಸ್ ಮುಖ್ಯ ಅತಿಥಿಗಳಾಗಿದ್ದರು. ರೆ.ಡಾ.ರೋಕ್ ಡಿಸೋಜ – ಧರ್ಮಗುರು, ಮೌಂಟ್ ರೋಸರಿ ಚರ್ಚ್, ರೆವೆರೆಂಡ್ ಕಿಶೋರ್ ಕುಮಾರ್ - ಸಭಾಪಾಲಕರು ಸೇಂಟ್ ಪಾಲ್ ಚರ್ಚ್, ಸುಬ್ರಹ್ಮಣ್ಯ ನಗರ ಮತ್ತು ಅಧ್ಯಕ್ಷರು, ಉಡುಪಿ ವಲಯ ಪರಿಷತ್ತು (ಸಿಎಸ್ಐ, ಕೆಎಸ್ಡಿ), ರೆ. ಫಾ. ಡೆನಿಸ್ ಡಿ'ಸಾ - ಪಿಆರ್ಒ, ಉಡುಪಿ ಧರ್ಮಪ್ರಾಂತ್ಯ, ಡಾ ವಿನ್ಸೆಂಟ್ ಆಳ್ವಾ ಪ್ರಾಂಶುಪಾಲರು, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಶ್ರೀಮತಿ ವೆರೊನಿಕಾ ಕರ್ನೆಲಿಯೊ - ಮಾಜಿ ಅಧ್ಯಕ್ಷರು, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್, ಜನಾಬ್ ಎಂ.ಎಸ್. ಖಾನ್ - ಮಾಜಿ ಅಧ್ಯಕ್ಷರು, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ (ರಿ) ಮತ್ತು ಉಮೇಶ್ ಶೆಟ್ಟಿ - ಅಧ್ಯಕ್ಷರು, ಕರಾವಳಿ ಕೊ-ಅಪರೇಟಿವ್ ಸೊಸೈಟಿ, ಕಲ್ಯಾಣಪುರ ಸಂತೆಕಟ್ಟೆ ಇವರು ಗೌರವ ಅತಿಥಿಗಳಾಗಿದ್ದರು.

ಸಹಕಾರ ರತ್ನ ಅನಿಲ್ ಲೋಬೋ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಖೆಯ ಉದ್ಘಾಟನೆಯ ಸಂದರ್ಭದಲ್ಲಿ ನೀಡಿದ ಬೆಂಬಲಕ್ಕಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಉದ್ಘಾಟನೆಯನ್ನು ಆಯೋಜಿಸಲು ಶ್ರಮಿಸಿದ ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೋ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರ ಆಶೀರ್ವಾದಕ್ಕಾಗಿ ವಂದನೆಗಳನ್ನು ಸಲ್ಲಿಸಿದರು.

ಎಂಸಿಸಿ ಬ್ಯಾಂಕ್ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಹೋಲಿಸಬಹುದಾದ ಎಲ್ಲಾ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಕನಿಷ್ಟ ಸೇವಾ ಶುಲ್ಕಗಳೊಂದಿಗೆ ನೀಡುತ್ತಿದೆ. ಎಂಸಿಸಿ ಬ್ಯಾಂಕ್ ತನ್ನ ಕಾರ್ಯಾಚರಣೆಯನ್ನು ಕರ್ನಾಟಕದಾದ್ಯಂತ ವಿಸ್ತರಿಸಿದೆ ಮತ್ತು ಎನ್ಆರ್ಐ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿರುವ ರಾಜ್ಯದ ಸಹಕಾರಿ ಬ್ಯಾಂಕ್ ಮಾತ್ರ ಎಂದು ಅವರು ತಿಳಿಸಿದರು. ನೂತನ ಶಾಖೆಯ ಯಶಸ್ಸಿಗೆ ಸಂತೆಕಟ್ಟೆ ಜನತೆಯ ಸಹಕಾರವನ್ನು ಕೋರಿದರು.

ಶಾಸಕರಾದ ಯಶಪಾಲ್ ಸುವರ್ಣ ಅವರು ಸಂತೆಕಟ್ಟೆಯ್ತಲ್ಲಿ 21 ನೇ ಶಾಖೆಯನ್ನು ತೆರೆದ ಬ್ಯಾಂಕಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯನ್ನು ಅಭಿನಂದಿಸಿದರು ಮತ್ತು ಸಹಕಾರಿ ಬ್ಯಾಂಕಿಂಗ್ಗೆ ಅವರ ಬದ್ಧತೆಯನ್ನು ಶ್ಲಾಘಿಸಿದರು. ಅಧ್ಯಕ್ಷ ಅನಿಲ್ ಲೋಬೊ ಅವರೊಂದಿಗಿನ ತಮ್ಮ ವೃತ್ತಿಪರ ಒಡನಾಟವನ್ನು ಅವರು ನೆನಪಿಸಿಕೊಂಡರು ಮತ್ತು ಎಂಸಿಸಿ ಬ್ಯಾಂಕ್ಗೆ ತಮ್ಮ ನಿರಂತರ ಬೆಂಬಲದ ಭರವಸೆ ನೀಡಿದರು.

ವಂದನಿಯ ಫಾ| ಡೆನಿಸ್ ಡೆಸಾ ಮತನಾಡಿ ಬ್ಯಾಂಕಿನ ಇತ್ತಿಚೀನ ಪ್ರಗತಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಸಾಂಸ್ಥಿಕ ಯಶಸ್ಸಿನ ಆಧಾರ ಸ್ತಂಭಗಳಾಗಿ ಸತ್ಯ, ನಂಬಿಕೆ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಒತ್ತಿ ಹೇಳಿದರು. ರೆವೆರೆಂಡ್ ಕಿಶೋರ್ ಕುಮಾರ್, ವಂದನೀಯ ಮೊ| ಫರ್ಡಿನಾಂಡ್ ಗೊನ್ಸಾಲ್ವಿಸ್, ಜನಾಬ್ ಎಂ.ಎಸ್. ಖಾನ್, ಶ್ರೀಮತಿ ವೆರೋನಿಕಾ ಕಾರ್ನೆಲಿಯೊ, ಮತ್ತು ಡಾ ವಿನ್ಸೆಂಟ್ ಆಳ್ವಾ ಸಾಂದರ್ಭಿಕವಾಗಿ ಮತನಾಡಿ ಶುಭ ಹಾರೈಸಿದರು.

ಸಮಾಜಕ್ಕೆ ಸಲ್ಲಿಸಿದ ಉದಾತ್ತ ಸೇವೆಯನ್ನು ಗುರುತಿಸಿ, ದಿ ಹ್ಯಾಪಿ ಹೋಮ್ ಫಾರ್ ದಿ ಏಜ್ಡ್ ಮತ್ತು ನೂರ್ ಉಲ್ ಫುರ್ಖಾನ್ ಸಂತೆಕಟ್ಟೆಯ ಸಂಸ್ಥೆಗಳ ಮುಖ್ಯಸ್ಥರಿಗೆ ಬ್ಯಾಂಕಿನ ದತ್ತಿ ನಿಧಿಯಿಂದ ತಲಾ ₹ 25,000/- ಚೆಕ್ ಅನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಬುಲೆಟಿನ್ ಅನ್ನು ಬಿಡುಗಡೆ ಮಾಡಲಾಯಿತು. ಸಂಪಾದಕ ಡಾ ಜೆರಾಲ್ಡ್ ಪಿಂಟೋ ಮತ್ತು ಉಪ ಸಂಪಾದಕರಾದ ಕು| ಶೆರಿ ಆಸ್ನಾ ಉಪಸ್ಥಿತರಿದ್ದರು.

ಎಂ.ಸಿ.ಸಿ ಬ್ಯಾಂಕ್ ಜಿಗಿಬಿಗಿ ತಾರಾಂ ಸೀಸನ್ 2 ರ ಅಂತಿಮ ಸ್ಪರ್ಧಿ ಮತ್ತು ಕೊಂಕಣಿ ನಾಟಕ ಸಭಾ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಶ್ರೀಮತಿ ಲಿಯೋನಾ ಒಲಿವೇರಾ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ನಿಯಂತ್ರಕರಾಗಿ ನೇಮಕಗೊಂಡಿರುವ ಡಾ| ಗೊಡ್ವಿನ್ ಡಿಸೋಜಾ ಮತ್ತು ಮಿಸ್ ಇಂಡಿಯಾ ಫ್ರೈಡ್ ಅಫ್ ಇಂಡಿಯ 2025 ನಿಶಾಲಿನ್ ಕುಂದರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅತ್ಯುತ್ತಮ ಫಲಿತಾಂಶ ಪಡೆದ ಸ್ಥಳೀಯ ಶಾಲಾ-ಕಾಲೇಜುಗಳನ್ನು ಸನ್ಮಾನಿಸಲಾಯಿತು. ಸಂತೆಕಟ್ಟೆ ಕ್ಷೇತ್ರದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು. ನೂತನ ಶಾಖೆಯಲ್ಲಿ ಖಾತೆ ತೆರೆದ ಪ್ರಮುಖ ಗ್ರಾಹಕರನ್ನು ಸನ್ಮಾನಿಸಲಾಯಿತು.

ನಿರ್ದೇಶಕ ಡಾ|.ಜೆರಾಲ್ಡ್ ಪಿಂಟೋ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಅಜಿತ್ ಪ್ರಿಸ್ಟಲ್ ಡಿಸೋಜ ವಂದಿಸಿದರು. ಸ್ಟೀವನ್ ಕೊಲಾಕೋ ಕಾರ್ಯಕ್ರಮವನ್ನು ನಿರೂಪಿಸಿದರು.

ಉಪಾಧ್ಯಕ್ಷ, ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರು ಆಂಡ್ರ್ಯೂ ಡಿಸೋಜಾ, ಡೇವಿಡ್ ಡಿಸೋಜಾ, ಮೆಲ್ವಿನ್ ವಾಸ್, ಜೆ.ಪಿ. ರೋಡ್ರಿಗಸ್, ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಎಲ್ರಾಯ್ ಕಿರಣ್ ಕ್ರಾಸ್ಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್ ಮತ್ತು ಅಲ್ವಿನ್ ಮೊಂತೇರೊ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.