



ಬೆಂಗಳೂರು: ಕೆಲವರಿಗಂತೂ ನಾನ್ ವೆಜ್ ಇಲ್ಲದೇ ಊಟವೇ ಸೇರಲ್ಲ, ಕನಿಷ್ಠ ಪಕ್ಷ ಮೊಟ್ಟೆಯಾದ್ರು ಊಟದ ಜೊತೆ ಇರ್ಲೇಬೇಕು. ಇದೀಗ ಇಂತಹ ಮಾಂಸ – ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಚಿಕನ್ ದರ ಸಹ ಹೆಚ್ಚಾಗಿದೆ. ಚಿಕನ್ ಬೆಲೆ ವಿಥ್ ಸ್ಕೀನ್ ಗೆ ಕೆ.ಜಿಗೆ 236 ರೂ. ಹಾಗೂ ಚಿಕನ್ ವಿಥ್ ಔಟ್ ಸ್ಕೀನ್ ಕೆ.ಜಿಗೆ 266 ರೂ. ಆಗಿದೆ. ಜೊತೆಗೆ ಮಟನ್ ರೇಟ್ ಸಹ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.
ಒಂದು ಮೊಟ್ಟೆ ಬೆಲೆ 6 ರೂ. ರಿಂದ 7 ರೂ. ಆಗಿದೆ. ಬೇಸಿಗೆಯಾಗಿದ್ದರಿಂದ ಕೋಳಿಗಳು ಸಾಯುತ್ತಿವೆ. ಜೊತೆಗೆ ಆಂಧ್ರಪ್ರದೇಶಕ್ಕೆ ರಾಜ್ಯದಿಂದ ಹೆಚ್ಚು ರಫ್ತಾಗಿದೆ. ಹೀಗಾಗಿ ಅಭಾವ ಉಂಟಾಗಿದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಮೊಟ್ಟೆ, ಚಿಕನ್ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಅಂತಾ ವ್ಯಾಪಾರಿಗಳ ಮಾತಾಗಿದೆ.
ಬೆಲೆ ಏರಿಕೆ ಆಗಿರುವುದರಿಂದ ಮೊಟ್ಟೆಯಿಂದ ಮಾಡುವ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.