logo
WhatsApp Image 2026-04-02 at 14.46.04.jpeg
hindalco everlast.jpeg

" ಮಳೆಗಾಲ ನೆನಪು "

ಟ್ರೆಂಡಿಂಗ್
share whatsappshare facebookshare telegram
10 Jun 2024
post image

ಪ್ರವೀಣ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ

ಕುಣಿದು ಕುಪ್ಪಳಿಸುವ ಸಮಯ, ವಿದ್ಯಾರ್ಥಿಗಳು ರಜೆಗೆ ಆತುರದಿಂದ ಕಾಯುವ ಕ್ಷಣ, ಮನೆಯಲ್ಲಿ ಬಿಸಿ ಬಿಸಿ ತಿಂಡಿ ತಿನಿಸುಗಳನ್ನು ತಿನ್ನುವ ಕ್ಷಣ, ಕುಟುಂಬಡೊಡನೆ ಕುಳಿತುಕೊಂಡು ಸಂಭಾಷಣೆ ನಡೆಸುವ ಸಮಯ, ಎಲ್ಲರೂ ಸೇರಿಕೊಂಡು ರಾತ್ರಿಯ ವೇಳೆಯಲ್ಲಿ ಏಡಿ.. ಮೀನು.. ಹಿಡಿಯುವ ಸಮಯ, ಮನೆಯಲ್ಲಿ ಚಹಾ  ಕುಡಿಯುತ್ತಾ.. ಮಳೆಯನ್ನು ಆನಂದಿಸುವ ಸಮಯ......

ಬೇಸಿಗೆ ಕಾಲ ಮುಗಿದು ಬರುವುದೇ ಮಳೆಗಾಲ,ಆ ಬೇಸಿಗೆ ಕಾಲಕ್ಕೆ ನೀರಿಲ್ಲದೆ ಪರದಾಡುತ್ತಿರುವ ಜನರಿಗೆ ಮಳೆಬಂದರೆ ಸ್ವರ್ಗವನ್ನು ನೋಡಿದಾಗೆ ಹಾಗುತ್ತದೆ. ಮಳೆ ಎಂದರೆ ಕೇವಲ ನೀರಲ್ಲ ಅದು ಎಷ್ಟೋ ಜನರಿಗೆ ದೇವರು ಎನ್ನಬಹುದು...

ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗುವ ಸಮಯ, ಆವಾಗಲೇ ಮಳೆ ಬರುವ ಸಮಯ, ಮಳೆ ಬಂದರೆ ಸಾಕು ರಜೆ ಸಿಗಬಹುದು ಎನ್ನುವ  ಆಸೆಯಿಂದ ಟಿವಿ ಯ ಮುಂದೆ ಕುಳಿತು ವಾರ್ತೆಯನ್ನು ನೋಡುತ್ತಾರೆ. ರಜೆ ಸಿಕ್ಕರೆ ಎಲ್ಲಾ ವಿದ್ಯಾರ್ಥಿಗಳು ಮಳೆಯಲ್ಲಿಯೇ ಕುಣಿದು ಕುಪ್ಪಳಿಸುತ್ತಾರೆ. ಅದೇ ರೀತಿ ಮನೆಯಲ್ಲಿ ಮಕ್ಳಳಿಗೆ ಬಿಸಿ ಬಿಸಿ  ತಿಂಡಿಗಳನ್ನು ತಿನ್ನುವಂತಹ ಸಮಯ.. ಅದೇ ರೀತಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಮಾತನಾಡುವಂತಹ ಕ್ಷಣ.. ಅದು ಮರೆಯಲಾಗದ ನೆನಪು...... ರಾತ್ರಿಯ ವೇಳೆಯಲ್ಲಿ ಮಳೆಯಲ್ಲಿ ನೆನೆಯುತ್ತಾ ಸ್ನೇಹಿತರೆಲ್ಲರೂ ಸೇರಿಕೊಂಡು ಏಡಿ, ಮೀನು,  ಇಡಿಯುವುದು,,  ಅದೊಂದು ಏಡಿ, ಮೀನಿನ ರುಚಿಯನ್ನು ಸವಿಯುವ ಕ್ಷಣ...... ಮಳೆ ಎಂಬುದು ನೆನಪು ಮರೆಯಲಾಗದೆ ಹೊಳಪನ್ನು ತೋರಿಸುತ್ತದೆ.........

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.