



ಹೊಸದಿಲ್ಲಿ: ಆ್ಯಕ್ಸಿಸ್ ಬ್ಯಾಂಕ್ ವತಿಯಿಂದ 11,603 ಕೋಟಿ ರೂ.ಗಳಿಗೆ ಸಿಟಿಬ್ಯಾಂಕ್ ಇಂಡಿಯಾದ ಚಿಲ್ಲರೆ ವ್ಯಾಪಾರ ಖರೀದಿ ಒಪ್ಪಂದ ಬುಧವಾರ ಪೂರ್ಣಗೊಂಡಿದೆ. ಈ ಒಪ್ಪಂದದಲ್ಲಿ ಸಿಟಿಬ್ಯಾಂಕ್ ಇಂಡಿಯಾದ ಸಾಂಸ್ಥಿಕ ಗ್ರಾಹಕ ವ್ಯವಹಾರಗಳು ಸೇರ್ಪಡೆಯಾಗುವುದಿಲ್ಲ.
ಈ ಕುರಿತು ಮಾಹಿತಿ ನೀಡಿದ ಆ್ಯಕ್ಸಿಸ್ ಬ್ಯಾಂಕ್ ಎಂಡಿ, ಸಿಇಒ ಅಮಿತಾಬ್ ಚೌಧರಿ, “ಆ್ಯಕ್ಸಿಸ್ ಬ್ಯಾಂಕ್ ಜತೆಗೆ ಸಿಟಿಬ್ಯಾಂಕ್ ಇಂಡಿಯಾದ ಸಂಪೂರ್ಣ ವಿಲೀನ ಪ್ರಕ್ರಿಯೆ ಮುಂದಿನ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ದೇಶದಲ್ಲಿರುವ 24 ಲಕ್ಷ ಸಿಟಿಬ್ಯಾಂಕ್ ಗ್ರಾಹಕರು ಇನ್ನು ಮುಂದೆ ಆ್ಯಕ್ಸಿಸ್ ಬ್ಯಾಂಕ್ ಗ್ರಾಹಕರಾಗಲಿದ್ದಾರೆ. ಅಲ್ಲದೇ ಶೇ.96ರಷ್ಟು ಅಂದರೆ 3,200 ಸಿಟಿಬ್ಯಾಂಕ್ ಉದ್ಯೋಗಿಗಳು ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರ್ಪಡೆಯಾಗಿದ್ದಾರೆ,’ ಎಂದು ತಿಳಿಸಿದ್ದಾರೆ.
“ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರುವ ಸಿಟಿಬ್ಯಾಂಕ್ ಗ್ರಾಹಕರ ಖಾತೆ ಸಂಖ್ಯೆ, ಚೆಕ್ ಬುಕ್, ಡೆಬಿಟ್ ಕಾರ್ಡ್ ಸೇರಿದಂತೆ ಈಗಿರುವ ಸೌಲಭ್ಯಗಳು ಹಾಗೆಯೇ ಮುಂದುವರಿಯಲಿದೆ,’ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.