



ಮೆಕ್ಸಿಕೋ : ಮೆಕ್ಸಿಕೋದ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಪುರಾತತ್ವಶಾಸ್ತ್ರಜ್ಞರು ಪ್ರಾಚೀನ ಮಾಯನ್ ನಾಗರೀಕತೆಯ ಪ್ರಸಿದ್ಧ ನಗರವೊಂದರ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ. ಕ್ರಿ.ಶ. 600-900 ರ ಅವಧಿಯಲ್ಲಿ ಈ ನಗರದಲ್ಲಿ ಸುಮಾರು 4,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆಂದು ಪುರತತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇಲ್ಲಿ ವಿಶಾಲವಾದ ನೆಲಮಾಳಿಗೆ, ಮೆಟ್ಟಿಲುಗಳನ್ನು ಹೊಂದಿದ್ದ ಅರಮನೆಯಂತಹ ಕಟ್ಟಡದ ಅವಶೇಷಗಳು ಪತ್ತೆಯಾಗಿದೆ. ಇವುಗಳಲ್ಲಿ ಗಣ್ಯರಾದ ಪುರೋಹಿತರು ವಾಸಿಸುತ್ತಿದ್ದರು. ನಗರದ ಹೊರಭಾಗದಲ್ಲಿ ಪತ್ತೆಯಾದ ಸಣ್ಣ ಕಟ್ಟಡಗಳಲ್ಲಿ ಸಾಮಾನ್ಯ ಜನರು ವಾಸಿಸುತ್ತಿದ್ದರು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಆ ಪ್ರದೇಶಕ್ಕೆ ಸಮೀಪದಲ್ಲಿಯೇ ವಯಸ್ಕರು ಮತ್ತು ಮಕ್ಕಳ ಸಮಾಧಿ ಸ್ಥಳ ಸಹ ಪತ್ತೆಯಾಗಿದೆ. ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಪುರಾತತ್ವಶಾಸ್ತ್ರಜ್ಞರು ಪ್ರಾಚೀನ ಮಾಯನ್ ನಾಗರೀಕತೆಯ ಪ್ರಸಿದ್ಧ ನಗರವೊಂದರ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ. ಕ್ರಿ.ಶ. 600-900 ರ ಅವಧಿಯಲ್ಲಿ ಈ ನಗರದಲ್ಲಿ ಸುಮಾರು 4,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆಂದು ಪುರತತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇಲ್ಲಿ ವಿಶಾಲವಾದ ನೆಲಮಾಳಿಗೆ, ಮೆಟ್ಟಿಲುಗಳನ್ನು ಹೊಂದಿದ್ದ ಅರಮನೆಯಂತಹ ಕಟ್ಟಡದ ಅವಶೇಷಗಳು ಪತ್ತೆಯಾಗಿದೆ. ಇವುಗಳಲ್ಲಿ ಗಣ್ಯರಾದ ಪುರೋಹಿತರು ವಾಸಿಸುತ್ತಿದ್ದರು. ನಗರದ ಹೊರಭಾಗದಲ್ಲಿ ಪತ್ತೆಯಾದ ಸಣ್ಣ ಕಟ್ಟಡಗಳಲ್ಲಿ ಸಾಮಾನ್ಯ ಜನರು ವಾಸಿಸುತ್ತಿದ್ದರು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಆ ಪ್ರದೇಶಕ್ಕೆ ಸಮೀಪದಲ್ಲಿಯೇ ವಯಸ್ಕರು ಮತ್ತು ಮಕ್ಕಳ ಸಮಾಧಿ ಸ್ಥಳ ಸಹ ಪತ್ತೆಯಾಗಿದೆ. ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.