



ಸ್ಯಾನ್ ಫ್ರಾನ್ಸಿಸ್ಕೋ: ಮೈಕ್ರೋಸಾಫ್ಟ್ ಇನ್ನು ಮುಂದೆ ವರ್ಡ್‌ಪ್ಯಾಡ್’ಗೆ ಯಾವುದೇ ಅಪ್ಡೇಟ್ ನೀಡುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಸುಮಾರು 30 ವರ್ಷಗಳ ನಂತರ ವಿಂಡೋಸ್’ನ ಭವಿಷ್ಯದ ಆವೃತ್ತಿಗಳಿಂದ ವರ್ಡ್ ಪ್ರೊಸೆಸರ್ ಅನ್ನು ತೆಗೆದುಹಾಕುವುದಾಗಿ ತಿಳಿಸಿದೆ.
ಪರ್ಯಾಯವಾಗಿ, ಮೈಕ್ರೋಸಾಫ್ಟ್ ತನ್ನ ಪಾವತಿಸಿದ ವರ್ಡ್ ಪ್ರೊಸೆಸರ್ ಎಂಎಸ್ ವರ್ಡ್ ಅನ್ನು ಬಳಸುವಂತೆ ಹೇಳಿದೆ. ವರ್ಡ್ ಪ್ಯಾಡ್‌ಗಿಂತ ತುಂಬಾ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಬಳಸಲು ಸುಲಭವಾದ ಎಂಎಸ್ ವರ್ಡ್ 1995 ರಿಂದ ವಿಂಡೋಸ್‌ನೊಂದಿಗೆ ಲಭ್ಯವಾಗುತ್ತಿದೆ.
ವರ್ಡ್ಪ್ಯಾಡ್ ಗೆ ಇನ್ನು ಮುಂದೆ ಅಪ್‌ಡೇಟ್‌ಗಳು ಬರಲಾರವು ಮತ್ತು ವಿಂಡೋಸ್‌ನ ಭವಿಷ್ಯದ ಆವೃತ್ತಿಗಳಿಂದ ಅದನ್ನು ತೆಗೆದುಹಾಕಲಾಗುವುದು. .doc ಮತ್ತು .rtf ನಂತಹ ರಿಚ್ ಟೆಕ್ಟ್ ಡಾಕ್ಯುಮೆಂಟ್ ತಯಾರಿಸಲು ಮೈಕ್ರೋಸಾಫ್ಟ್ ವರ್ಡ್ ಮತ್ತು .txt ನಂತಹ ಸರಳ ಟೆಸ್ಟ್ ಫೈಲ್ ತಯಾರಿಸಲು ವಿಂಡೋಸ್ ನೋಟ್ ಪ್ಯಾಡ್ ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ’ ಎಂದು ಮೈಕ್ರೋಸಾಫ್ಟ್ ಶುಕ್ರವಾರ ಪ್ರಕಟಿಸಿದ ಸಪೋರ್ಟ್ ನೋಟ್’ನಲ್ಲಿ ಹೇಳಲಾಗಿದೆ.
ನೋಟ್ ಪ್ಯಾಡ್’ನಲ್ಲಿ ಆಟೋಸೇವ್ ಮತ್ತು ಟ್ಯಾಬ್ ಹಿಂತೆಗೆದುಕೊಳ್ಳುವಿಕೆಯಂತಹ ವೈಶಿಷ್ಟ್ಯಗಳ ಅಪ್ಡೇಟ್ ನೀಡಿದ ಒಂದು ದಿನದ ನಂತರ ಮೈಕ್ರೋಸಾಫ್ಟ್ ತನ್ನ ವರ್ಡ್ ಪ್ಯಾಡ್ ಬಗ್ಗೆ ಹೊಸ ಮಾಹಿತಿ ನೀಡಿದೆ. ವಿಂಡೋಸ್ 11 ನಲ್ಲಿನ ವಿಂಡೋಸ್ ನೋಟ್ ಪ್ಯಾಡ್ ಅಪ್ಲಿಕೇಶನ್ ಅನ್ನು ಅನೇಕ ವರ್ಷಗಳ ನಂತರ 2018 ರಲ್ಲಿ ಮೊದಲ ಬಾರಿಗೆ ಅಪೇಟ್ ಮಾಡಲಾಗಿತ್ತು ಮತ್ತು ಟ್ಯಾಬ್ ಗಳನ್ನು ಸೇರಿಸಲಾಗಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.