logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಸೂಲಗಿತ್ತಿಯರ ದಿನದ ಆಚರಣೆ: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳಲ್ಲಿ ಸೂಲಗಿತ್ತಿಯರ ಮತ್ತು ಆಶಾ ಕಾರ್ಯಕರ್ತೆಯರ ಕೊಡುಗೆಗಳ ಮಾನ್ಯತೆ

ಟ್ರೆಂಡಿಂಗ್
share whatsappshare facebookshare telegram
16 May 2024
post image

ಮಂಗಳೂರು: ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ (ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಒಂದು ಘಟಕ ) ನ ಪ್ರಸೂತಿ ಮತ್ತು ಸ್ತ್ರೀ ರೋಗ ಶುಶ್ರೂಷ ವಿಭಾಗವು, ಮಂಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಸೂಲಗಿತ್ತಿ ದಿನದ ಆಚರಣೆಯನ್ನು ಸಂಸ್ಥೆಯ ದಶವಾರ್ಷಿಕ ಸ್ಮಾರಕ ಸಭಾಂಗಣದಲ್ಲಿ ಇಂದು ಆಯೋಜಿಸಿತ್ತು.

ಕಾರ್ಯಕ್ರಮವು ಬೆಳಿಗ್ಗೆ 9 ಘಂಟೆಗೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿತ್ತಿರುವ ಡಾ ದೀಪಾ ಕಣಗಲ್ ರವರ ಎಚ್ ಪಿ ವಿ ಕುರಿತ ಪ್ರಬುದ್ಧ ಭಾಷಣದೊಂದಿಗೆ ಪ್ರಾರಂಭವಾಯಿತು. ಅಧಿಕೃತ ಉದ್ಘಾಟನೆಯು ಬೆಳಿಗ್ಗೆ 10 ಘಂಟೆಗೆ ನೆರವೇರಿತು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ರಮ್ಯಶ್ರೀ ಎಸ್, ಆಗಮಿಸಿದವರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು. ಮಂಗಳೂರಿನ ಜಿಲ್ಲಾ ಆರೋಗ್ಯಧಿಕಾರಿಯಾದ ಡಾ ಎಚ್ ಆರ್ ತಿಮ್ಮಯ್ಯರವರು ಸಮಾಜಕ್ಕೆ ಸೂಲಗಿತ್ತಿಯರ ಮತ್ತು ಆಶಾ ಕಾರ್ಯಕರ್ತೆಯರ ಅಮೂಲ್ಯ ಕೊಡುಗೆಗಳ ಕುರಿತು ಒತ್ತಿ ಹೇಳಿದರು. ಅವರು ಕಲಿಕೆಯ ನಿರಂತರ ಸ್ವಭಾವವನ್ನು ಹಾಗೂ ತಾಯಂದಿರ ಮತ್ತು ದಾದಿಯರ ನಿರ್ಣಾಯಕ ಪಾತ್ರಗಳನ್ನು ಒತ್ತಿ ಹೇಳಿದರು. ಮಹಿಳೆಯರು ಅಥವಾ ದಾದಿಯರು ಇಲ್ಲದೆ ಪ್ರಪಂಚವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸಿದರು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲ್ಯೊರವರು ಅಧ್ಯಕ್ಷೀಯ ಭಾಷಣ ಮಾಡಿದರು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಅಗತ್ಯದ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು ಆಗಾಗ್ಗೆ ಅವರು ಪಡುವ ಶ್ರಮವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಎತ್ತಿ ಹೇಳಿದರು ಮತ್ತು ಭಾಗವಹಿಸಿದ ಎಲ್ಲರಿಗೂ ಅವರಿಗೆ ಒದಗಿಸಿದ ಅವಕಾಶಗಳನ್ನು ಸದುಪಯೋಗ ಮಾಡುವಂತೆ ಪ್ರೋತ್ಸಾಹಿಸಿದರು.

ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯಾದ ಶ್ರೀಮತಿ ದಮಯಂತಿ ಎನ್, ಅವರನ್ನು ಮಹಿಳೆಯರು ಮತ್ತು ಮಕ್ಕಳಿಗಾಗಿ ಸಲ್ಲಿಸಿದ ಸಮರ್ಪಿತ ಸೇವೆಗಾಗಿ ಸನ್ಮಾನಿಸಲಾಯಿತು. ಶ್ರೀಮತಿ ಕ್ಲೆರಿಟ ಲೋಬೊರವರ ವಂದನಾರ್ಪಣೆಯೊಂದಿಗೆ ಅಧಿವೇಶನವು ಮುಕ್ತಾಯಗೊಂಡಿತು. ಸಾಂಪ್ರದಾಯಿಕ ಕಾರ್ಯದ ನಂತರ, ಪ್ರಸೂತಿ ಮತ್ತು ಸ್ತ್ರೀ ರೋಗ ಶುಶ್ರೂಷ ವಿಭಾಗವು, ಸಿ ಪಿ ಆರ್, ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯ ನಿರ್ವಹಣೆ ಮತ್ತು ಸ್ತನ ಸ್ವಯಂ ಪರೀಕ್ಷೆಗಳ ಕುರಿತು ಪ್ತಾಯೋಗಿಕ ಅವಧಿಯನ್ನು ನಡೆಸಿಕೊಟ್ಟರು. ಹೆಚ್ಚುವರಿಯಾಗಿ ಸಂಸ್ಥೆಯ ಆವರಣದ ಪ್ರವಾಸದ ಸಮಯ, ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು. ದಕ್ಷಿಣ ಕನ್ನಡದಿಂದ ಒಟ್ಟಾಗಿ 66 ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಧ್ಯಾಹ್ನದ 1:30 ಘಂಟೆಗೆ ಮುಕ್ತಾಯಗೊಂಡಿತು.

ಈ ದಿನದ ಆಚರಣೆಯು ಸೂಲಗಿತ್ತಿಯರ ಮತ್ತು ಆಶಾ ಕಾರ್ಯಕರ್ತೆಯರ ನಿರ್ಣಾಯಕ ಕೆಲಸವನ್ನು ಗುರುತಿಸಿತಲ್ಲದೆ, ಮೌಲ್ಯಯುತವಾದ ತರಬೇತಿ ಮತ್ತು ಒಳನೋಟವನ್ನು ಸಹ ಒದಗಿಸಿ, ಈ ವೃತ್ತಿಪರರು ಆರೋಗ್ಯ ವ್ಯವಸ್ಥೆಯಲ್ಲಿ ವಹಿಸುವ ಪ್ರಮುಖ ಪಾತ್ರವನ್ನು ಬಲಪಡಿಸಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.