



ಮನಸ್ಸಿಗೆ ಮುದ ನೀಡುವ ಮುಂಗಾರು...
ಪ್ರವೀಣ್ ಪೂಜಾರಿ ಪ್ರತಿಕೋದ್ಯಮ ವಿಭಾಗ ಎಂ ಪಿ ಎಂ ಕಾರ್ಕಳ
ಮಳೆಗಾಲ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದೆಷ್ಟೋ ಬೇಜಾರಿದ್ದರು ಮಳೆ ಬಂದರೆ ಎಲ್ಲರ ಮನಸ್ಸು ಶುದ್ಧವಾಗಿ ಮನಸ್ಸಿಗೆ ಖುಷಿ ಸಿಗುತ್ತದೆ.ಮಳೆ ಎಂದರೆ ಸಾಕು ಏನೋ ಒಂಥರ ಖುಷಿ. ನಾವು ಶಾಲೆಗೆ ಹೋಗುವಂತ ಸಂದರ್ಭದಲ್ಲಿ ಮಳೆ ನೀರಿನಲ್ಲಿ ಆಟ ಆಡುತ್ತ ನಮ್ಮೊಡನೆ ಬರುತ್ತಿದ್ದ ಗೆಳೆಯ-ಗೆಳತಿಯರಿಗೆ ಮಳೆ ನೀರೆರೆಚುತ್ತ ಶಾಲೆಗೆ ಹೋಗುವುದೇ ಒಂದು ಚಂದ. ಆದರೆ ಈಗಿನ ಮಕ್ಕಳಿಗೆ ಅಂತಹ ಸಂದರ್ಭವೇ ಸಿಗುವುದಿಲ್ಲ.
ಈಗಿನ ಪರಿಸ್ಥಿತಿ ಹೇಗಾಗಿದೆ ಎಂದರೆ ಒಂದೆರಡು ದಿನ ಮಳೆ ಬಂದರೆ ಸಾಕು. ಶಾಲಾ-ಕಾಲೇಜುಗಳಿಗೆ ರಜೆ ನೀಡುತ್ತಾರೆ. ಇದರಿಂದ ಮಳೆಯಲ್ಲಿ ಸಿಗುವ ಸಂತೋಷವನ್ನು ಪಡೆಯುವ ಅದೃಷ್ಟ ಈಗಿನ ಮಕ್ಕಳಿಗೆ ಇಲ್ಲ. ಮಳೆ ಬಂದಾಗ ನಮ್ಮಷ್ಟಕ್ಕೆ ಹಾಡು ಹೇಳುತ್ತಾ ಹೋಗುವುದು, ಕೊಡೆ ಇದ್ದರು ಬಿಡಿಸಲು ಉದಾಸೀನವಾಗಿ ಹಾಗೆ ನೆನೆದುಕೊಂಡು ಹೋದ ದಿನಗಳು ಸಹ ಇವೆ.
ಇನ್ನು ಜೋರಾಗಿ ಗಾಳಿ ಬಂದರೆ ಎಲ್ಲಿ ನಮ್ಮ ಕೊಡೆ ತಾವರೆ ಆಗುತ್ತದೆಯೋ ಅನ್ನೋ ಭಯ. ಆದರೂ ಆಗ ಸಿಗುವಂತ ಖುಷಿ ಮತ್ತೆ ಬರಲು ಸಾಧ್ಯವೇ ಇಲ್ಲ. ಮಳೆಗಾಲದಲ್ಲಿ ಪರಿಸರವನ್ನು ನೋಡುವುದೇ ಒಂದು ಮನಸ್ಸಿಗೆ ಮುದ. ಇನ್ನು ಮುಂಗಾರು ಮಳೆ ಆರಂಭವಾದ ನಂತರ ಕೇಳಲೇ ಬೇಕಾಗಿಲ್ಲ. ಮನಸ್ಸಿಗೆ ಬೇಜಾರು ಆಗಿದ್ದರೆ ಒಂದು ಸಾರಿ ಮಳೆ ಬರುವ ಕ್ಷಣವನ್ನು ಕಣ್ತುಂಬಿ ಕೊಂಡರೆ ಸಾಕು. ಮನಸ್ಸಿನ ಭಾರ, ಬೇಜಾರು ಎಲ್ಲಾ ಕಡಿಮೆ ಆಗುತ್ತದೆ. ಮುಂಗಾರು ಮಳೆ ಎಂತವರ ಮನಸ್ಸನ್ನು ಎಂತ ಪರಿಸ್ಥಿತಿಯಲ್ಲೂ ಸಹ ತಿಳಿ ಮಾಡುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.