



ಉಡುಪಿ, ಸೆಪ್ಟಂಬರ್, 23: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್‌ರವರು, ಸೆಪ್ಟಂಬರ್ 24 ರಿಂದ 27ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆಪ್ಟಂಬರ್ 24 ರಂದು ಬೆ. 10 ರಿಂದ 11 ರವರೆಗೆ ಕಾರ್ಕಳದ ವಿಕಾಸ ಜನಸೇವಾ ಕಛೇರಿಯಲ್ಲಿ ಸಾರ್ವಜನಿಕರ ಭೇಟಿ, 11 ರಿಂದ 12 ರವರೆಗೆ ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ. ಮ 12.30 ರಿಂದ 2 ರವರೆಗೆ ಕಾರ್ಕಳದ ವಿಕಾಸ ಜನಸೇವಾ ಕಛೇರಿಯಲ್ಲಿ ಸಾರ್ವಜನಿಕರ ಭೇಟಿ. ನಂತರ ಮಂಗಳೂರಿಗೆ ತೆರಳುವರು.
ಸೆಪ್ಟಂಬರ್ 25 ರಂದು ಬೆ. 7.30 ಕ್ಕೆ ಮುಂಡ್ಕೂರು ಮಾರುಕಟ್ಟೆಯ ಗುದ್ದಲಿ ಪೂಜೆ, ಬೆ. 8 ಗಂಟೆಗೆ ಬೆಳ್ಮಣ್ ಮಾರುಕಟ್ಟೆಯ ಗುದ್ದಲಿ ಪೂಜೆ, 8.45ಕ್ಕೆ ಪಳ್ಳಿ-ಬೈಲೂರು ರಸ್ತೆ ಮತ್ತು ಪಳ್ಳಿ ಗರಡಿ ರಸ್ತೆಯ ಗುದ್ದಲಿ ಪೂಜೆ, 10 ಗಂಟೆಗೆ ಕಾರ್ಕಳದ ಅನಂತ ಶಯನದ ಬಳಿ ಫಿಟ್ ಇಂಡಿಯಾ ಫ್ರೀಡಂ ರನ್‌ಗೆ ಚಾಲನೆ. 10.30ಕ್ಕೆ ಕಾರ್ಕಳದ ಹವಾಲ್ದಾರ ಬೆಟ್ಟು ಬಳಿ ಸ್ಲಡ್ಜ್ ಮ್ಯಾನೇಜ್‌ಮೆಂಟ್ ಘಟಕ ಸ್ಥಳ ವೀಕ್ಷಣೆ. 11 ರಿಂದ 12 ರವರೆಗೆ ಕಾರ್ಕಳದ ವಿಕಾಸ ಜನಸೇವಾ ಕಛೇರಿಯಲ್ಲಿ ಸಾರ್ವಜನಿಕರ ಭೇಟಿ, ಮ.1 ಗಂಟೆಗೆ ಉಪ್ಪೂರಿನ ಕೊಳಲಗಿರಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಉದ್ಘಾಟನೆ. 3 ರಿಂದ 4 ರವರೆಗೆ ಕಾರ್ಕಳದ ವಿಕಾಸ ಸೌಧದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ. ನಂತರ ಮಂಗಳೂರಿಗೆ ತೆರಳುವರು. ಸೆಪ್ಟಂಬರ್ 26 ರಂದು ಬೆ. 9 ರಿಂದ 11 ರವರೆಗೆ ಹೆಬ್ರಿಯ ಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆ, ನಂತರ ತೀರ್ಥಹಳ್ಳಿಗೆ ತೆರಳಲಿದ್ದಾರೆ. ಸಂಜೆ 7.30 ಕ್ಕೆ ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ಇಂಜಿನಿರ‍್ಸ್ ಡೇ ಕಾರ್ಯಕ್ರಮ.
ಸೆ. 27 ರಂದು ಬೆ. 9 ರಿಂದ ರಾತ್ರಿ 8 ರವರೆಗೆ ಕಾರ್ಕಳ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆ. 28 ರಂದು ಬೆ. 6.30 ಗಂಟೆಗೆ ಕಾರ್ಕಳದಿಂದ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.