



ಕಾರ್ಕಳ : ಕಾರ್ಕಳದ ಕಲೆ,ಸಂಸ್ಕೃತಿ, ಕ್ರೀಡೆಗಳಿಗೆ ವಿಶ್ವ ಮನ್ನಣೆ ದೊರಕಿಸುವಲ್ಲಿ ಕಾರ್ಕಳದ ಪ್ರತಿಭೆಗಳ ಸೇವೆ ಅಪಾರ ವಾಗಿದೆ .ಕಾರ್ಕಳ ಐತಿಹಾಸಿಕ ಕ್ಷೇತ್ರ. ವಾಗಿದ್ದು ಅಗಾಧ ಸಂಸ್ಕೃತಿ, ಶ್ರೀಮಂತಿಕೆ ಹೊಂದಿದ ತಾಲೂಕಾಗಿದೆ . ಹಲವು ಪ್ರೇಕ್ಷಣಿಯ ಸ್ಥಳಗಳನ್ನು ಒಳಗೊಂಡು ಜೈನ ಕಾಶಿ ಎಂದೆ ಕರೆಯಲ್ಪಡುತ್ತಿದೆ. ಎಲ್ಲರ ಶ್ರಮದಿಂದ ಕಾರ್ಕಳ ಬೆಳೆದಿದೆ. ಹಿರಿಯರು ಸಾಹಿತ್ಯ ಕೃಷಿ, ಸಾಂಸ್ಕೃತಿಕ ಕೊಡುಗೆಯನ್ನಷ್ಟೆ ಅಲ್ಲ ಧಾರ್ಮಿಕವಾಗಿಯೂ ಕಾರ್ಕಳವನ್ನು ಕಟ್ಟಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು. ಸ್ವರಾಜ್ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವ ಬೃಹತ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಉತ್ಸವದ ಯಶಸ್ವಿಗೆ 37 ಸಮಿತಿಗಳು ರಚನೆಯಾಗಿದ್ದು ಈಗಾಗಲೆ ಕರ‍್ಯಾಚರಿಸುತ್ತಲಿವೆ . ಕಾರ್ಕಳ ಉತ್ಸವವು ಯಶಸ್ಸು ಗೊಳಿಸುವ ಮೂಲಕ ದಾಖಲೆ ಬರೆಯಲಿದೆ. ಎಲ್ಲಿಯು ಕುಂದು ಕೊರತೆ ಬಾರದಂತೆ ಪ್ರತಿಯೊಬ್ಬರು ಗಮನಿಸಬೇಕು. ಇದು ನಮ್ಮ ನಿಮ್ಮೆಲ್ಲ;ರ ಉತ್ಸವ . ಮಾ.10ರಿಂದ 17ರ ತನಕ ಗಾಂಧೀ ಮೈದಾನದಲ್ಲಿ ವಿವಿಧ ಕಾರ್ಯಕ್ರಮ, 18ರಿಂದ 20ರ ತನಕ ಸ್ವರಾಜ್ ಮೈದಾನದಲ್ಲಿ ಉತ್ಸವ ನಡೆಯುತ್ತದೆ. ಮನೋರಂಜನೆಗೆ ಸೀಮಿತ ವಾಗದೆ ಎಲ್ಲ ಆರ್ಥೀಕ ಚಟುವಟಿಕೆಗಳಿಗೆ ಅವಕಾಶ ನೀಡಿದ್ದೇವೆ ಎಂದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ, ಮಾತನಾಡಿ ಕಾರ್ಕಳದ ಜನ ಶ್ರೇಷ್ಠರು,ಸಾಧನಶೀಲರಾಗಿದ್ದಾರೆ. ಸಚಿವ ಸುನಿಲ್‌ಕುಮಾರ್ ಕ್ಷೇತ್ರಕ್ಕೆ ಅಭಿವೃದ್ಧಿ ಮೂಲಕ ಹೊಸತನವನ್ನು ಹೆಚ್ಚು ಕೊಡುಗೆ ನೀಡಿದ್ದಾರೆ.ಎಂದರು ಕಾರ್ಕಳ ಉತ್ಸವ ಯಶಸ್ಸಿಗೆ ಸರ್ವರ ಸಹಕಾರವನ್ನು ಕೋರಿದರು. ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ ಕಾರ್ಕಳ ಉತ್ಸವದ ಕಲ್ಪನೆ ಸಕಾರಗೊಳ್ಳಲಿ. ಇದರಿಂದ ಹಲವಾರು ಪ್ರತಿಭೆಗಳ ಅನಾವರಣಗೊಳ್ಳಲಿ ಎಂದು ಶುಭ ಹಾರೈಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿದೇಶಕ ಮಲ್ಲಿಕಾರ್ಜುನ ಸ್ವಾಮಿ, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕಿ ನಿರ್ದೇಶಕಿ ಪೂರ್ಣಿಮ, ಕುಂದಾಪುರ ವಿಭಾಗ ಸಹಾಯಕ ಕಮಿಷನರ್ ರಾಜು, ತಹಶಿಲ್ದಾರ್ ಪುರಂದರ ಕೆ. ಶಿಲ್ಪಿ ಸತೀಶ್ ಆಚಾರ್ಯ, ಉದ್ಯಮಿ ಸುಬ್ರಾಯ ಪೈ, ಸಂತೋಷ್ ಡಿಸಿಲ್ವ, ಬಾಲಾಜಿ ಅಯ್ಯಪ್ಪ ಮಂದಿರದ ಬಾಲಕೃಷ್ಣ ಹೆಗ್ಡೆ ವೇದಿಕೆಯಲ್ಲಿದ್ದರು. ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಪ್ತಸ್ತಾವನೆಗೈದರು. ಪ್ರಭಾಕರ ಶೆಟ್ಟಿ ಕೊಂಡಲ್ಲಿ ಸ್ವಾಗತಿಸಿದರು. ರಾಜೇಂದ್ರ ಭಟ್ ನಿರೂಪಿಸಿದರು.
ಕಾರ್ಕಳ ಉತ್ಸವದ ಪೂರ್ವ ತಯಾರಿಯಾಗಿ ಸಾವಿರ ಬಲೂನ್‌ಗಳನ್ನು ಆಕಾಶದ ಕಡೆಗೆ ತೇಲಿ ಬಿಟ್ಟು ಚಾಲನೆ ನೀಡಲಾಯಿತು. ನಾಡಿನ ವಿವಿಧ ಕಲಾತಂಡಗಳು ಆಗಮಿಸಿದ್ದು ಪ್ರದರ್ಶನ ನೀಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.