



ಕಾರ್ಕಳ; ಶೃಂಗೇರಿ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಗಾಯಗೊಂಡು ಬಿದ್ದಿದ್ದ ಬಾಳೆ ಹೊನ್ನೂರು ಮೂಲದ ಯುವಕನೋರ್ವನನ್ನು ಅದೇ ಮಾರ್ಗವಾಗಿ ಬರುತಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ರಕ್ಷಿಸಿ ತನ್ನ ಬೆಂಗಾವಲು ಪಡೆ ವಾಹನದಲ್ಲಿ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯ ತೋರಿದ ಘಟನೆ ಮೇ. 5 ರಂದು ಸಂಜೆ ನಡೆದಿದೆ..ಸಚಿವರು ತಮ್ಮ ಕುಟುಂಬ ಸದಸ್ಯರೊಂದಿಗೆ ಶ್ರಂಗೇರಿ ಕಡೆಯಿಂದ ಕಾರ್ಕಳಕ್ಕೆ ಬರುತಿದ್ದರು. ದಾರಿ ಮದ್ಯೆ ಕಾರ್ಕಳ ಕಡೆಯಿಂದ ಬೈಕಿನಲ್ಲಿ ತೆರಳುತಿದ್ದ ಸವಾರನೋರ್ವ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ.ಆತನ ರಕ್ಷಣೆಗೆ ಯಾರು ಹೋಗಿರಲಿಲ್ಲ.ಇದೇ ವೇಳೆ ಇದೆ ದಾರಿಯಲ್ಲಿ ಬರುತಿದ್ದ ಸಚಿವರು ವಾಹನ ನಿಲ್ಲಿಸಿ ಗಾಯಾಳು ಬಳಿ ಹೋಗಿ ವಿಚಾರಿಸಿ, ಧೈರ್ಯ ತುಂಬಿ ತಮ್ಮ ವಾಹನದಲ್ಲಿ ಮನೆಮಂದಿ ಇದ್ದ ಕಾರಣ ಬೆಂಗಾಲು ವಾಹನದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ವ್ಯಕ್ತಪಡಿಸಿದ್ದಾರೆ.ಈ ದ್ರಶ್ಯವನ್ನು ಸ್ಥಳಿಯರು ಚಿತ್ರಿಕರಿಸಿದ್ದಾರೆ.ಯುವಕ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಚಿವರ ಭದ್ರತ ಸಿಬಂದಿ ಪ್ರಭಾಕರ, ಸಚಿವರು ಮನೆಯವರು ಸಹಕರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.