



ಮಂಗಳೂರು: ಅಪ್ಸ್ ಮಾಡೆಲ್ ಮ್ಯಾನೇಜ್ಮೆಂಟ್ ಮತ್ತು ಅಸ್ತ್ರ ಗ್ರೂಪ್ ವತಿಯಿಂದ ಮಿಸ್ಟರ್, ಮಿಸ್, ಟೀನ್, ಮಿಸ್ಟ್ರೆಸ್ ಕರಾವಳಿ 2024 ಸ್ಪರ್ಧೆಯನ್ನು ಸೆಪ್ಟೆಂಬರ್ 15 ರಂದು ಮಂಗಳೂರಿನ ಎ.ಜೆ. ಗ್ರ್ಯಾಂಡ್ ಹೋಟೆಲ್ ನಲ್ಲಿ ಆಯೋಜಿಸಲಾಯಿತು.
ಈ ಇವೆಂಟ್‌ನಲ್ಲಿ ವಿವಿಧ ವಿಭಾಗಗಳ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ವಿಜೇತರ ವಿವರಗಳು:
ಮಿಸ್ಟರ್ ಕರಾವಳಿ ಪ್ರಶಸ್ತಿ ವಿಜೇತ- ರಂಜಿತ್ ಗಾಣಿಗ
ಮೊದಲನೇ ರನ್ನರ್ ಅಪ್- ಕೌಸ್ತುಭ ಶೆಟ್ಟಿ
ಎರಡನೇ ರನ್ನರ್ ಅಪ್- ಕಾರ್ತಿಕ್ ವೈ.ಬಿ.
ಮಿಸ್ ಕರಾವಳಿ ಪ್ರಶಸ್ತಿ ವಿಜೇತರು- ರಿಷಾ ಟಾನ್ಯಾ ಪಿಂಟೊ
ಮೊದಲನೇ ರನ್ನರ್ ಅಪ್- ಸ್ನೇಹಾ ಚವ್ಹಾಣ್
ಎರಡನೇ ರನ್ನರ್ ಅಪ್- ಶ್ರದ್ದಾ
ಟೀನ್ ಕರಾವಳಿ ಪ್ರಶಸ್ತಿ ವಿಜೇತರು- ಆಶ್ನಾ ಜುವೆಲ್ ಡಿಸೋಜ
ಮೊದಲನೇ ರನ್ನರ್ ಅಪ್- ಸೋನಾಲ್ ತಾವ್ರೊ
ಎರಡನೇ ರನ್ನರ್-ಅಪ್- ರೆಬೆಕ್ಕಾ ಮಾರಿಯಾ ರೋಡ್ರಿಗ್ಸ್
ಮಿಸ್ಟ್ರೆಸ್ ಕರಾವಳಿ ಪ್ರಶಸ್ತಿ ವಿಜೇತರು- ಅನೋಲಾ ಕೆ .ಜೆ
ಮೊದಲನೇ ರನ್ನರ್ ಅಪ್- ಪಲ್ಲವಿ ಕಾರಂತ
ಎರಡನೇ ರನ್ನರ್ ಅಪ್- ಸುನಿತಾ ಸ್ಟೆಲ್ಲಾ ಲಸ್ರಾಡೊ
ತೀರ್ಪುಗಾರರಾದ ಶ್ರೇಯಸ್ ಭಂಡಾರ್ಕರ್, ಗಾನಾ ಭಟ್, ಅರುಂದತಿ ಲಾಲಾ, ಗಂಗಾಧರ ಪೂಜಾರಿ ಮತ್ತು ವಿಶಾಲ್ ಕಲ್ಘಟ್ಕಿ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು,ಸ್ಪರ್ಧಿಗಳ ಪ್ರತಿಭೆಯನ್ನು ಮೆಚ್ಚಿಕೊಂಡು, ಅವರ ಆತ್ಮವಿಶ್ವಾಸ, ಕೌಶಲ್ಯ ಮತ್ತು ನಿಲುವು ಬಗ್ಗೆ ಪ್ರಶಂಸಿಸಿದರು ಹಾಗೂ ಮಾರ್ಗದರ್ಶನ ನೀಡಿದರು.
ಚೈತನ್ಯ ಕೋಟ್ಟಾರಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ಅಸ್ತ್ರ ಗ್ರೂಪ್ ಸಿಇಓ ಲಂಚುಲಾಲ್, ಭಾಗ್ಯಲಕ್ಷ್ಮೀ ಸಿಲ್ಕ್ಸ್ ಮಾಲಕ ರಂಜಿತ್, ಲಲಿತಾ ಜುವೆಲ್ಲರಿ ಮ್ಯಾನೇಜರ್ ಪ್ರಶಾಂತ್, ಹಾಗೂ ರಾಜ್ಯ ಯುವ ಕಾಂಗ್ರೆಸ್ ಸಂಚಾಲಕ ಸೋಹಾನ್ ಎಸ್ .ಕೆ ., ಅನಿಲ್ ದಾಸ್ , ಪ್ರತಿಭಾ ಸಾಲಿಯಾನ್ , ಬಿಜೆಪಿ ಕೋಟೆಕಾರು ಮಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ಅತುಲ್ ಕುಮಾರ್, ಬಬಿತಾ ನರೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಪ್ಸ್ ಮಾಡೆಲ್ ಮ್ಯಾನೇಜ್ಮೆಂಟ್ ನ ಸಿಇಓ ಪ್ರದೀಪ್ ಕುಮಾರ್ ಹಾಗೂ ಮಣಿಯವರ ಉಪಸ್ಥಿತಿಯಲ್ಲಿ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.