



ಉಡುಪಿ; ಕೇದಾರೋತ್ಥಾನ ಟ್ರಸ್ಟ್ ಉಡುಪಿ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಉಡುಪಿ ಇದರ ವತಿಯಿಂದ ನಡೆದ ಹಡಿಲು ಭೂಮಿ ಕೃಷಿ ಗದ್ದೆಗಳಲ್ಲಿ ಬೆಳೆದ ಭತ್ತದ ಕಳೆಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಮಣಿಪಾಲದ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಇಂದು "ಕಾಂತಾರ" ಚಲನಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಶಾಸಕ ಕೆ ರಘುಪತಿ ಭಟ್ ವಿದ್ಯಾರ್ಥಿಗಳೊಂದಿಗೆ" ಚಲನಚಿತ್ರ ವೀಕ್ಷಿಸಿದರು.* ಈ ಸಂದರ್ಭದಲ್ಲಿ "ಕಾಂತಾರಾ" ಚಲನಚಿತ್ರದಲ್ಲಿ ನಟಿಸಿದ ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರಾದ ಪ್ರಭಾಕರ್ ಬ್ರಹ್ಮಾವರ, ಭಾಸ್ಕರ್ ಮಣಿಪಾಲ, ಸಂದೀಪ್ ಕುಮಾರ್, ಪ್ರಕಾಶ್ ಉಪ್ಪುಂದ, ರಮಾನಂದ ಬಂಗೇರ, ಚಂದ್ರಕಲಾ ಭಟ್, ಮಾನಸಿ ಸುಧೀರ್, ಶ್ರೀಪಾದ್ ಹೆಗ್ಡೆ, ಉದಯ ಹಾಲಂಬಿ, ಶೇಖರ ಹಾಲಂಬಿ ಇವರನ್ನು ಸನ್ಮಾನಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.