



ಕಾರ್ಕಳ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ವಿ. ಸುನಿಲ್ ಕುಮಾರ್ ಅವರನ್ನು ನೇಮಿಸಲಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಡಿ. 23 ರಂದು ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. 10 ಮಂದಿ ಉಪಾಧ್ಯಕ್ಷರು, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಉಪಾಧ್ಯಕ್ಷರಾಗಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ (ಬಾಗಲಕೋಟೆ), ಬೈರತಿ ಬಸವರಾಜ್ (ಬೆಂಗಳೂರು), ನಾಯಕರಾದ ರಾಜುಗೌಡ ನಾಯಕ್ (ಯಾದಗಿರಿ), ಎನ್ ಮಹೇಶ್ (ಚಾಮರಾಜನಗರ), ಅನಿಲ್ ಬೆನಕೆ (ಬೆಳಗಾವಿ), ಹರತಾಳು ಹಾಲಪ್ಪ (ಶಿವಮೊಗ್ಗ), ರೂಪಾಲಿ ನಾಯಕ್ (ಉತ್ತರ ಕನ್ನಡ), ಡಾ. ಬಸವರಾಜ್ ಕೇಲಗಾರ (ಹಾವೇರಿ), ಮಾಳವಿಕಾ ಅವಿನಾಶ್ (ಬೆಂಗಳೂರು) ಹಾಗೂ ಎಂ. ರಾಜೇಂದ್ರ (ಮೈಸೂರು) ಅವರನ್ನು ನೇಮಿಸಲಾಗಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕುಡಚಿಯ ಪಿ ರಾಜೀವ್, ಬೆಂಗಳೂರಿನ ನಂದೀಶ್ ರೆಡ್ಡಿ, ಹಾಸನ ಪ್ರೀತಮ್ ಗೌಡ ನೇಮಕಗೊಂಡಿದ್ದಾರೆ.
ರಾಜ್ಯ ಕಾರ್ಯದರ್ಶಿಗಳಾಗಿ ಬೀದರ್‌ನ ಶೈಲೇಂದ್ರ ಬೆಲ್ದಾಳೆ, ಶಿವಮೊಗ್ಗ ಡಿ.ಎಸ್ ಅರುಣ್, ಕಲಬುರಗಿಯ ಬಸವರಾಜ್ ಮತ್ತಿಮೋಡ್, ಚಿಕ್ಕಬಳ್ಳಾಪುರದ ಸಿ ಮುನಿರಾಜು, ತುಮಕೂರಿನ ವಿನಯ್ ಬಿದರೆ, ಮಂಗಳೂರಿನ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೊಪ್ಪಳದ ಶರಣು ತಳ್ಳಕೇರಿ, ಯಾದಗಿರಿಯ ಲಲಿತಾ ಅನಾಪುರ, ಮಂಡ್ಯದ ಲಕ್ಷ್ಮೀ ಅಶ್ವಿನ್ ಗೌಡ, ತುಮಕೂರಿನ ಅಂಬಿಕಾ ಹುಲಿನಾಯ್ಕರ್. ಬಿಜೆಪಿ ರಾಜ್ಯ ಖಚಾಂಚಿಯಾಗಿ ಬೆಂಗಳೂರಿನ ಸುಬ್ಬ ನರಸಿಂಹ ಅವರನ್ನು ಮುಂದುವರಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.