



ದೇಶದ ಬ್ಯಾಂಕ್ ಗಳಿಗೆ ಮೊಬೈಲ್ ವೈರಸ್ ಕಾಟ ಶುರುವಾಗಿದೆ ಆ ವೈರಸ್ ಹೆಸರೆ SOVA . ಎಸ್‌ಬಿ ಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳು SOVA ವೈರಸ್ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿವೆ., ಯಾವುದೇ ಕಾರಣಕ್ಕೂ ಅನಧಿಕೃತ ಮೂಲಗಳಿಂದ ಸ್ವೀಕರಿಸಿದ ಲಿಂಕ್ ಕ್ಲಿಕ್ ಮಾಡುವ ಮೂಲಕ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡದಂತೆ ಎಸ್‌ಬಿಐ ಹೇಳಿದೆ. ಇತ್ತ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ SOVA ಟ್ರೋಜನ್ ವಿರುದ್ಧ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಭಯಾನಕ SOVA ಮಾಲ್‌ವೇರ್‌ನ ಇತ್ತೀಚಿನ ಆವೃತ್ತಿಯು ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಗುಪ್ತವಾಗಿ ಸೇರಿಕೊಳ್ಳುತ್ತಿದೆ. ಈ ವೈರಸ್ ಅನ್ನು Chrome, Amazon, NFT ಪ್ಲಾಟ್‌ಫಾರ್ಮ್‌ಗಳ ಲೋಗೊಗಳಂತೆ ರೂಪಿಸಲಾಗಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರು ಇದಕ್ಕೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಒಮ್ಮೆ ಈ ವೈರಸ್ ಸ್ಮಾರ್ಟ್‌ಫೋನ್ ಒಳಗೆ ಸೇರಿಕೊಂಡರೆ, ಬಳಕೆದಾರರು ತಮ್ಮ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಿಗೆ ಲಾಗ್ ಇನ್ ಮಾಡಿದಾಗ ಮತ್ತು ಬ್ಯಾಂಕ್ ಖಾತೆಗಳಿಗೆ ಪ್ರವೇಶಿಸಿದ ಎಲ್ಲಾ ಮಾಹಿತಿಯನ್ನು ಸೆರೆಹಿಡಿಯುತ್ತದೆ ಮತ್ತು ಈ ಮಾಹಿತಿಯನ್ನು ವಂಚಕರಿಗೆ ಕಳುಹಿಸಿಕೊಡುವುದು ಕಂಡುಬಂದಿದೆ. ಹಾಗಾಗಿ, ಈ ಬಗ್ಗೆ ಗ್ರಾಹಕರು ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.