logo
WhatsApp Image 2026-04-02 at 14.46.04.jpeg
hindalco everlast.jpeg

ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟ್ರಿಯ ಪ್ರಶಸ್ತಿಗೆ ಮೊಹಮ್ಮದ್ ಫಾರೂಕ್ ಚಂದ್ರನಗರ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
11 Apr 2022
post image

ನವದೆಹಲಿ: ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ದೆಹಲಿ ವತಿಯಿಂದ ಏಪ್ರಿಲ್ 20 ರಂದು ಗೋವಾದ ಪಂಚಾತಾರ ಹೋಟೆಲ್ ವಿವಿಟಾ ತಾಜ್ ಸಭಾಂಗಣದಲ್ಲಿ ನಡೆಯುವ ಐ.ಜೆ.ಸಿ ಹಾಗೂ ಇ.ಜೆ.ಎಸ್.ಐ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವಕರಿಗೆ ಕೊಡಮಾಡುವ ಜನಸೇವಾ ಸದ್ಭಾವನ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿಯನ್ನು ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ ಎಂದು ಇಂಡಿಯನ್ ಜರ್ನಲಿಸ್ಟ್ ಕಾಂಪೆಡಿಯಂ ಸಂಸ್ಥೆ ಇದರ ಅಧ್ಯಕ್ಷರಾದ ಗ್ಯಾನ್ ಪ್ರಕಾಶ್ ದೆಹಲಿ ಇವರು ಪತ್ರಿಕಾ ಮೂಲಕ ತಿಳಿಸಿದ್ದಾರೆ ಹಾಗೂ ಈ ಸಮಾರಂಭದಲ್ಲಿ ಗೋವಾದ ಸಚಿವರು ಕೇಂದ್ರ ಸಚಿವರು ಹಾಗೂ ಅನೇಕ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಅವರು ತಿಳಿಸಿದ್ದಾರೆ ಮೊಹಮ್ಮದ್ ಫಾರೂಕ್ ಉದ್ಯಮಿಯಾಗಿದ್ದು ಸ್ನೇಹ ಜೀವಿಯಾಗಿ ಕಾಪು ಪರಿಸರದ ಸಮಾಜ ಸೇವಕರಾಗಿ ಎಲ್ಲರ ಗಮನ ಸೆಳೆದು ನೂರಾರು ಕಡೆ ಗೌರವ ಸನ್ಮಾನ ಪಡೆದುಕೊಂಡಿರುತ್ತಾರೆ ಈಗಾಗಲೇ ಏಶ್ಯನ್ ಫೆಸೀಫಿಕ್ ಗೋಲ್ಡ್ ಸ್ಟಾರ್ ರಾಷ್ಟ್ರಿಯ ಪ್ರಶಸ್ತಿ,ಕರ್ನಾಟಕ ಸರಕಾರ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೇರಳ-ಕರ್ನಾಟಕ ರಾಜ್ಯದ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ಸಾಧಕ ರತ್ನ ಪ್ರಶಸ್ತಿ ಕಾಸರಗೋಡು ಕೈರಳಿ ಪ್ರಕಾಶನ ಇವರಿಂದ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿರುತ್ತಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.