



ಕಾರ್ಕಳ ಆ: ೨೧: ಮಾಜಿ ಮುಖ್ಯಮಂತ್ರಿ, ಕಾರ್ಕಳ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ವೀರಪ್ಪ ಮೊಯಿಲಿಯವರ ಹೇಳಿಕೆ ತೀವ್ರ ಹಾಸ್ಯಾಸ್ಪದ. ಕಳೆದ ೬೫ ವರ್ಷಗಳಷ್ಟು ಸುಧೀರ್ಘವಾಗಿ ದೇಶವನ್ನು ಲೂಟಿ ಮಾಡಿ ಆಳಿದ ಕಾಂಗ್ರೆಸ್ ಪಕ್ಷ ಪೆಟ್ರೋಲ್, ಡಿಸೇಲ್ ಬೆಲೆ ನಿಯಂತ್ರಣಕ್ಕೆ ಪ್ರಯತ್ನ ಪಡಲಿಲ್ಲ. ಈಗ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಬ್ಯಾರಲ್ ಬೆಲೆ ನಿಯಂತ್ರಣದಲ್ಲಿರದ ಕಾರಣ ಸದ್ಯಕ್ಕೆ ವಿಶ್ವದಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಲು ಕಾರಣವಾಗಿದ್ದು ಮುಂದಿನ ಕೆಲವೇ ದಿನದಲ್ಲಿ ಬೆಲೆ ಹತೋಟಿಗೆ ಬರಲಿರುವುದು. ಅಲ್ಪಸಂಖ್ಯಾತರ ಮತಕ್ಕಾಗಿ ಈ ಹಿಂದಿನಿಂದಲು ಗೋಹತ್ಯೆ ಹಾಗೂ ಮತಾಂತರಕ್ಕೆ ಕುಮ್ಮಕ್ಕು ನೀಡಿರುವುದಕ್ಕೆ ಕಾಂಗ್ರೆಸ್ ಕಾರಣ. ಪ್ರಸ್ತುತ ರಾಜ್ಯ ಬಿಜೆಪಿ ಸರಕಾರ ಹೊಸ ಕಾನೂನಿನ ಮೂಲಕ ಗೋಹತ್ಯೆ ಹಾಗೂ ಮತಾಂತರ ಹಾವಳಿಯನ್ನು ಸಂಪೂರ್ಣ ತೊಲಗಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುವುದು ಬೇಸರದ ಸಂಗತಿ. ಈತನಕ ಕಾರ್ಕಳದಲ್ಲಿ ನಾಯಕತ್ವ ಕೊರತೆಗೆ ಸನ್ಮಾನ್ಯ ವೀರಪ್ಪ ಮೊಯಿಲಿಯವರೇ ಕಾರಣವೆಂಬುವುದು ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರ ಸಾರ್ವಜನಿಕರ ಮಾತು ಈಗ ನಿಜವಾಗಿದೆ. ಹಾಗಾಗಿ ಗೌರವಾನ್ವಿತ ಮಾಜಿ ಮುಖ್ಯಮಂತ್ರಿ ಕೇಂದ್ರ ಪೆಟ್ರೋಲಿಯಂ ಮಾಜಿ ಸಚಿವರಾದ ವೀರಪ್ಪ ಮೊಯಿಲಿಯವರು ಅಪರೂಪಕ್ಕೊಮ್ಮೆ ಕಾರ್ಕಳ ಪ್ರವಾಸಕ್ಕೆ ಬರುವಾಗ ಸರಿಯಾದ ಮಾಹಿತಿಯೊಂದಿಗೆ ಮಾಧ್ಯಮದವರಿಗೆ ತಿಳಿಯಪಡಿಸುವುದು ಒಳಿತು ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.