



ಬೆಂಗಳೂರು: ಸಾರ್ವಜನಿಕರಿಂದ ಭಾರಿ ವಿರೋಧ ಉಂಟಾಗಿದ್ದ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಸರ್ಕಾರ ಸಿದ್ಧತೆ ಕೈಗೊಂಡಿದೆ. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಉಳಿಸಿಕೊಳ್ಳಲು 2023ರ ಒಳಗೆ ಮೀಟರ್ ಅಳವಡಿಸುವುದು ಕಡ್ಡಾಯವಾಗಲಿದೆ.ಪ್ರತಿ ತಿಂಗಳಿಗೂ ಮೊದಲೇ ಶುಲ್ಕ ಪಾವತಿಸಬೇಕಿದೆ. ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಣೆ ಮತ್ತು ಆದಾಯ ಸೋರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ. ಈ ವಿದ್ಯುತ್ ಮೀಟರ್ ಗಳಿಗೆ ಶೇಕಡಾ 15 ರಷ್ಟು ಸಬ್ಸಿಡಿ ನೀಡಲಾಗುವುದು. ಮುಂದಿನ ವರ್ಷ ವಿಧಾನಸಭಾ ಚುನಾವಣೆಯಿರುವ ಕಾರಣ ವಿವಾದಿತ ಪ್ರಿಪೆಯ್ಡ್ ಮೀಟರ್ ಅಳವಡಿಕೆ ಮುಂದೂಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ವಿವಾದ ವೇಕೆ : ಪ್ರಿಪೆಯ್ಡ್ ಮೀಟರ್ ಅಳವಡಿಕೆಯಿಂದ ರೈತರಿಗೆ ಕೃಷಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಗೆ ಕೋಕ್ ನೀಡಲಾಗುತ್ತದೆ ಎಂಬ ದೂರು ಬಂದ ಹಿನ್ನೆಲೆ ಯಲ್ಲಿ ಪ್ರೀಪೆಯ್ಡ್ ಮೀಟರ್ ಹಿನ್ನೆಲೆ ಗೆ ಸರಿದಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.