



ಮಣಿಪಾಲ: ಭಾರತ ಸರ್ಕಾರದ ನಿರುದ್ಯೋಗ ನಿರ್ಮೂಲನ ಏಜೆನ್ಸಿಯಾದ ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆಯಾದ ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ 2024-25ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯನ್ನು ಪ್ರಾರಂಭಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾದ ಶ್ರೀ ವಿಶ್ವನಾಥ ಕಾಮತ್‍ರವರು ಮಾತನಾಡಿ ಶಿಕ್ಷಕಿಯರು ಮಗುವಿನ ಪ್ರತಿಭೆಯನ್ನು ಗುರುತಿಸಿ ಒಳ್ಳೆಯ ಮಾರ್ಗದರ್ಶನ ನೀಡಬೇಕೆಂದರು. ಅಲ್ಲದೇ ಪೂರ್ವಪ್ರಾಥಮಿಕ ಶಿಕ್ಷಕಿಯರನ್ನು ಮಕ್ಕಳು ಎಂದಿಗೂ ನೆನಪಿಸಿಕೊಳ್ಳುತ್ತಾರೆ ಹಾಗೂ ಒಳ್ಳೆಯ ಶಿಕ್ಷಕಿಯಾಗಲು ಸದಾ ಪ್ರಯತ್ನಿಸಬೇಕೆಂದು ಸಂಸ್ಥೆಯಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿ ಶಿಕ್ಷಕಿಯರುಗಳಿಗೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾರವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್‍ನ ಅತ್ಯಗತ್ಯತೆಯನ್ನು ತಿಳಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ಸುನೀತಾರವರು ಸಂಸ್ಥೆಯ ಬಗ್ಗೆ ಹಾಗೂ ಉಪನ್ಯಾಸಕರನ್ನು ವಿದ್ಯಾರ್ಥಿ ಶಿಕ್ಷಕಿಯರಿಗೆ ಪರಿಚಯಿಸಿದರು.
ಉಪನ್ಯಾಸಕರಾದ ಶ್ರೀಮತಿ ದಿವ್ಯಾ ಕೋಟ್ಯಾನ್ ಮತ್ತು ಶ್ರೀಮತಿ ಅನುಷಾ ಆರ್. ನಾಯಕ್ ಅವರು ಮೊಂಟೆಸ್ಸರಿ ತರಬೇತಿಯ ಸಂಕ್ಷಿಪ್ತ ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ಶಿಕ್ಷಕಿಯಾದ ಶ್ರೀಮತಿ ರೇಷ್ಮಾರವರು ವಂದನಾರ್ಪಣೆಗೈದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.