



ಮೂಡಬಿದ್ರೆ: ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯೊಬ್ಬಳನ್ನು ಅಡ್ಡಗಟ್ಟಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ, ಕಿರುಕುಳ ನೀಡಿ ಹಲ್ಲೆಗೈದ ಘಟನೆ ಮೂಡಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂದಿಸುವಲ್ಲಿ ಮೂಡುಬಿದಿರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇರುವೈಲು ನಿವಾಸಿ ಅರ್ಷದ್ (21) ಬಂಧಿತ ಅರೋಪಿ ಎಂದು ಗುರುತಿಸಲಾಗಿದೆ.
ಕೋಟೆಬಾಗಿಲಿನ ಯುವತಿಯೋರ್ವಳು ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಟೈಲರ್ ಅಂಗಡಿಯೊಂದಕ್ಕೆ ಹೋಗುತ್ತಿರುವಾಗ ಕ್ಲಾಸ್‌ಮೇಟ್ ಆಗಿದ್ದ ಅರ್ಷದ್ (21) ಅಡ್ಡಗಟ್ಟಿ “ನೀನು ನನ್ನನ್ನು ಯಾಕೆ ಪ್ರೀತಿಸುತ್ತಿಲ್ಲ’ ಎಂದು ಹೇಳಿ ಮೈ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದಾನೆ. ಘಟನೆ ನಡೆದಾಗ ಯುವತಿ ಬೊಬ್ಬೆ ಹೊಡೆದ ಕೂಡಲೇ ಟೈಲರ್ ಹೊರಬಂದಾಗ ಆರೋಪಿ ಸ್ಥಳದಿಂದ ಓಡಿಹೋದ ಎಂದು ಯುವತಿ ನೀಡಿದ ದೂರಿಂನಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲವ್ ಜಿಹಾದ್ ಆರೋಪ- ಶರಣ್ ಪಂಪ್ ವೆಲ್: ಹಿಂದೂ ಯುವತಿಯರನ್ನು ಗುರಿಯಾಗಿಸಿ ಪ್ರೀತಿ ಪ್ರೇಮ ಎಂಬ ನಾಟಕವಾಡಿ ಮೋಸಮಾಡಿ ಅವರನ್ನು ಮತಾಂತರ ಮಾಡುವ ಒಂದು ವ್ಯವಸ್ಥಿತ ಗುಂಪು ಇದೆ ಇದರ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಮುಖ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.