



ಉಡುಪಿ: ಶ್ರೀಕೃಷ್ಣಮಠ ಪರ್ಯಾಯ ಕೃಷ್ಣಾಪುರದ ಮಠದ ಆಶ್ರಯದಲ್ಲಿ ನಗರದ ರಾಜಾಂಗಣದಲ್ಲಿ ಭಾನುವಾರ ಡಾ.ಗಿರಿಧರ ಕಜೆ ಬರೆದ ಶಿಶು ಲಾಲನೆ- ಗರ್ಭಿಣಿ ಪಾಲನೆ ‘ಜನನಿ’ ಕೃತಿ ಬಿಡುಗಡೆಗೊಳಿಸಲಾಯಿತು. ಕೃತಿ ಬಿಡುಗಡೆಗೊಳಿಸಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಾತನಾಡಿ, ಆಯುರ್ವೇದ ಇಡೀ ಜಗತ್ತಿನ ಭಾರತ ನೀಡಿದ ಒಂದು ದೊಡ್ಡ ಕೊಡುಗೆ. ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ವಿಚಾರಗಳು ಆಧುನಿಕ ವಿಜ್ಞಾನ ಇನ್ನು ತಿಳಿದುಕೊಂಡಿಲ್ಲ. ಆದುದರಿಂದ ಈ ಕುರಿತು ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು. ಆಯುರ್ವೇದ ವೈದ್ಯ ಡಾ.ಮುರಳೀಧರ ಶರ್ಮ, ಎಸ್ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಮುನಿಯಾಲು ಕಾಲೇಜಿನ ಉಪಪ್ರಾಂಶುಪಾಲ ಡಾ.ಹರಿಪ್ರಸಾದ್ ಭಟ್, ಕರ್ಣಾಟಕ ಬ್ಯಾಂಕಿನ ಎಜಿಎಂ ರಾಜಗೋಪಾಲ್ ಬಿ., ಸೆಲ್ಕೊ ಸಿಇಓ ಮೋಹನ್ ಭಾಸ್ಕರ ಹೆಗಡೆ ಉಪಸ್ಥಿತರಿದ್ದರು. ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಕಾರ ಡಾ.ಗಿರಿಧರ ಕಜೆ ಆಶಯ ನುಡಿದರು. ಶಶಿಧರ್ ಕಜೆ ಸ್ವಾಗತಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.