



ಉತ್ತರಾಖಂಡ: ರಾಜ್ಯದ ಹಲ್ದ್ವಾನಿ ಉಪ ಜೈಲಿನಲ್ಲಿರುವ 44ಕ್ಕೂ ಹೆಚ್ಚು ಕೈದಿಗಳಲ್ಲಿ ಎಚ್ಐವಿ ಸೋಂಕು ಪತ್ತೆಯಾಗಿದ್ದು, ಇದು ಜೈಲು ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿದೆ.
ಎಚ್ಐವಿ ಸೋಂಕುಪೀಡಿತ ಕೈದಿಗಳ ಪೈಕಿ ಮಹಿಳೆಯರೂ ಇರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸೋಂಕಿತ ಕೈದಿಗಳನ್ನು ಎನ್ಡಿಪಿಎಸ್ ಕಾಯ್ದೆಯಡಿ ಇರಿಸಲಾಗಿದೆ.
ಇತ್ತೀಚೆಗೆ ಉಪ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ ಶಿಬಿರದಲ್ಲಿ 55 ಕೈದಿಗಳಲ್ಲಿ ಎಚ್‌ಐವಿ ಇರುವುದು ದೃಢಪಟ್ಟಿದೆ.
ತನಿಖೆಯಲ್ಲಿ ಕಂಡು ಬಂದ ಸೋಂಕಿತರಲ್ಲಿ 2019 ರಿಂದ ಇಲ್ಲಿಯವರೆಗಿನ ಕೈದಿಗಳಿದ್ದಾರೆ. ಈ ಸೋಂಕಿತರಲ್ಲಿ ಹಲವರು ಕಳೆದ ಹಲವಾರು ವರ್ಷಗಳಿಂದ ಬಳಲುತ್ತಿದ್ದಾರೆ. ಹೊಸ ಕೈದಿಗಳೂ ಸೇರಿದ್ದಾರೆ.
ಸುಶೀಲಾ ತಿವಾರಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ದ್ವಾನಿ ಉಪ ಜೈಲಿನಲ್ಲಿ 1673 ಕೈದಿಗಳಿದ್ದಾರೆ. 1629 ಪುರುಷ ಕೈದಿ ಹಾಗೂ 70 ಮಹಿಳಾ ಕೈದಿಗಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.