



ಮಂಗಳೂರು: ನಿನ್ನೆನಗರದ ಮೋರ್ಗನ್ ಗೇಟ್ ವೈಷ್ಣವಿ ಎಕ್ಸ್ ಪ್ರೆ ಸ್ ಕಾರ್ಗೋ ಪ್ರೈ.ಲಿ. , ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಹಾರಿಸಿದ ಗುಂಡು ಮಗ ಸುಧೀಂದ್ರ ನ ತಲೆಯ ಒಳಗೆ ಹೊಕ್ಕಿತ್ತು ,ಆದರೆ ಮಗ ಸುಧೀಂದ್ರ ಸಾವು ಬದುಕಿನ ನಡುವೆ ಹೋರಾಡಿ ಇಂದು ಇಹಲೋಕ ತ್ಯಜಿಸಿದ್ದಾನೆ. ರಾಜೇಶ್ ಪ್ರಭು ಬಳಿ ಕೆಲಸದವರೊಬ್ಬರು ಸಂಬಳ ಕೇಳಲು ಬಂದಿದ್ದರು.ಗಲಾಟೆ ನಡುವೆ ಸಿಟ್ಟಿಗೆದ್ದ ರಾಜೇಶ್ ಪ್ರಭು ತನ್ನ ಬಳಿ ಇದ್ದ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದು ಅದು ತಪ್ಪಿ ತನ್ನ ಮಗನ ಮೇಲೆ ಬಿದ್ದಿದೆ. ಮಗ ಸುಧೀಂದ್ರನ ತಲೆಯ ಭಾಗಕ್ಕೆ ಗುಂಡು ಬಿದ್ದಿತ್ತು ಸಂಬಳ ಕೇಳಲು ಬಂದಿದ್ದ ಕೆಲಸದಾಳು ಅಪಾಯದಿಂದ ಪಾರಾಗಿದ್ದಾನೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.