



ಉಡುಪಿ: ಮುಚ್ಲಕೋಡಿನ ದೇವಸ್ಥಾನದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವತಃ ಬಾವಿಗಿಳಿದು ರಕ್ಷಿಸಿದ್ದಾರೆ.
ಬೆಕ್ಕಿನ ಮರಿ 40 ಅಡಿ ಆಳದ ಬಾವಿಗೆ ಬಿದ್ದಿರುವುದನ್ನು ಭಾನುವಾರ ದೇವಸ್ಥಾನಕ್ಕೇ ಭೇಟಿ ನೀಡಿದ್ದಾಗ ಕಂಡ ಅರವತ್ತು ವರ್ಷ ವಯಸ್ಸಿನ ಸ್ವಾಮೀಜಿ ಹಗ್ಗಕ್ಕೆ ಬಕೆಟ್ ಕಟ್ಟಿ ಮೇಲೆತ್ತಲು ಯತ್ನಿಸಿದರು. ಸಾಧ್ಯವಾಗದ್ದರಿಂದ ಸ್ವಾಮೀಜಿಯವರೇ ಹಗ್ಗದ ಸಹಾಯದಿಂದ 40 ಅಡಿ ಆಳದ ಬಾವಿಗಿಳಿದು ಬೆಕ್ಕಿನ ಮರಿ ಮೇಲೆತ್ತಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.