



ಕಾರ್ಕಳ: ಕೆಸರಿನ ಗೊಬ್ಬು ಸೌಹಾರ್ದತೆಯ ಪ್ರತೀಕವಾಗಿದೆ ಎಂದುೊಬ್ಬು ಸೌಹಾರ್ದತೆಯ ಪ್ರತೀಕವಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಅನಂದ ಹೆಗ್ಡೆ ಹೇಳಿದರು.
ಅವರು ಕಾರ್ಕಳ ತಾಲೂಕಿನ ಹೆರ್ಮುಂಡೆ ಯಲ್ಲಿವಿಷ್ಣು ಪ್ರೆಂಡ್ಸ್ ಹೆರ್ಮುಂಡೆ ನೇತೃತ್ವದಲ್ಲಿ ರವಿವಾರ ನಡೆದ ಕೆಸರ್ಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶವು ಕೃಷಿಯಾಧರಿತವಾಗಿದೆ. ರೈತ ನಮ್ಮ ದೇಶದ ಬೆನ್ನೆಲುಬಾಗಿದ್ದಾನೆ .ಆತನ ಶ್ರಮವು ದೇಶದ ಬೆಳವಣಿಗೆಗೆ ಮಹತ್ತರ ಪಾತ್ರವಿದೆ ಎಂದರು.
ಶ್ರೀಕಾಂತ್ ಭಟ್ ಮಾತನಾಡಿ ಕರಾವಳಿ ಭಾಗದ ಕೆಸರಿನ ಆಟವು ಬಹಳ ಜನಪ್ರಿಯತೆ ಗೊಳ್ಳುತಿದ್ದು , ಸಾಂಸ್ಕೃತಿಕ ಮೆರುಗನ್ನು ಪಡೆಯುತ್ತಿದೆ ಎಂದರು .
ವಿಷ್ಣು ಫ್ರೆಂಡ್ಸ್ ಅದ್ಯಕ್ಷ ಅನಿಲ್ ಹೆಗ್ಡೆ ಮಾತನಾಡಿ ಮಣ್ಣಿನ ಮಹತ್ವ ಅರಿಯಬೇಕು. ಮಣ್ಣಿನಲ್ಲಿ ದೇಹಕ್ಕೆ ಬೇಕಾದ ಆರೋಗ್ಯದ ಸತ್ವವಿದೆ .ಹಸಿರೊಡನೆ ಸಂಸ್ಕೃತಿಯ ಕಲರವವು ಮೇಳೈಸಲಿ ಎಂದು ಶುಭಹಾರೈಸಿದರು.
ಕಾರ್ಕಳ ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಮಂಜುನಾಥ್ ಹೆಗ್ಡೆ, ನಿವೃತ್ತ ಬ್ಯಾಂಕ್ ಪ್ರಬಂಧಕ ಶಂಕರ್ ಹೆಗ್ಡೆ ಮಾತನಾಡಿದರು.
ಸಭೆಯಲ್ಲಿ , ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧ್ಯಕ್ಷೆ ಭಾರತಿ , ವಿಷ್ಣು ಫ್ರೆಂಡ್ಸ್ ಕೋಶಾಧಿಕಾರಿ ಮಂಜುನಾಥ್ ನಾಯಕ್ , ಉಪಾಧ್ಯಕ್ಷ ಜೀವನ್ ನಾಯಕ್, ಗ್ರಾ.ಪಂ ಸದಸ್ಯ ಸತೀಶ್ ಹೆಗ್ಡೆ , ಜೀವನ್ ದಾಸ್ ನಾಯಕ್, ಉದಯ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು .ಉದಯ್ ಕುಲಾಲ್ ಕಾರ್ಯ ಕ್ರಮ ನಿರೂಪಿಸಿದ ರು, ಸ್ವಾತಿ ಭಟ್ ಬಳಗ ಪ್ರಾರ್ಥಿಸಿದರು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.