logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮುದ್ರಾಡಿ : ಶ್ರೀ ಕ್ಷೇತ್ರ ಅಭಯಹಸ್ತೆ ಆದಿಶಕ್ತಿ ದೇವಾಲಯ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

ಟ್ರೆಂಡಿಂಗ್
share whatsappshare facebookshare telegram
25 Jan 2022
post image

ಮುದ್ರಾಡಿ : ಕೋವಿಡ್‌ಸಂಕಷ್ಟದ ನಡುವೆಯೂ ಮುದ್ರಾಡಿಯ ಧರ್ಮಯೋಗಿ ಮೋಹನ್‌ಸ್ವಾಮೀಜಿಯವರ ತಪಸ್ಸಿನ ಪುಣ್ಯದ ಧರ್ಮಕ್ಷೇತ್ರ ಇದೀಗ ಸುಮಾರು ೨ ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾಮಯವಾಗಿ ಭವ್ಯವಾಗಿ ನಿರ್ಮಾಣಗೊಂಡಿದ್ದು ಸಮಸ್ತ ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಧರ್ಮಕೇಂದ್ರವಾಗಿ ಮೂಡಿಬರಲಿದೆ, ಫೆಬ್ರವರಿ ೨ರಿಂದ ೪ ರತನಕ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ನವಚಂಡಿಕಾ ಹೋಮ ಭಕ್ತಿ ವೈಭವದಿಂದ ನಡೆಯಲಿದ್ದು ಕ್ಷೇತ್ರಕ್ಕೆ ಸಮಸ್ತರ ಸಹಕಾರ ಬೇಕಾಗಿದೆ ಎಂದು ಮುದ್ರಾಡಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಹೇಳಿದರು.

ಅವರು ಮಂಗಳವಾರ ,ಕಾರ್ಕಳ ಪ್ರಕಾಶ್ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಸಿರು ಹೊರೆಕಾಣಿಕೆ : ಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇದೇ ೩೦ರಂದು ಮುದ್ರಾಡಿಯಿಂದ ಆಕರ್ಷಕ ಕಲಾ ತಂಡಗಳು, ಭಜನಾ ತಂಡಗಳ ಸಹಿತ ಕಲಾ ಪ್ರಕಾರಗಳ ಭವ್ಯವ ಮೆರವಣಿಗೆಯಲ್ಲಿ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ರವೀಂದ್ರ ಶೆಟ್ಟಿ ತಿಳಿಸಿದರು. ಅವತಾರ ಪುರುಷರಾದ ಸಾಯಿಬಾಬ ಮತ್ತು ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿಯ ಮೆರವಣಿಗೆಯೂ ನಡೆಯಲಿದೆ. ಸಾಗಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಘಸಂಸ್ಥೆಗಳು, ವಿವಿಧ ಉಪ ಸಮಿತಿಗಳನ್ನು ರಚಿಸಿದ್ದು ಎಲ್ಲರೂ ಶ್ರಮಿಸುತ್ತಿದ್ದಾರೆ. ಚಿಕ್ಕಮಗಳೂರಿನ ಕೆ.ಎಸ್.‌ ನಿತ್ಯಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.

ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನವೂ ನಾಡಿನ ಪ್ರತಿಷ್ಠಿತ ಕಲಾತಂಡಗಳಿಂದ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.

ಪ್ರತಿದಿನವೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಫೆ ೨ರಂದು ಗೌರಿಗದ್ದೆ ಕ್ಷೇತ್ರದ ಅವಧೂತ ವಿನಯ ಗುರೂಜಿ ಆಶೀರ್ವಚನ ನೀಡುವರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧಾರ್ಮಿಕ ಸಭೆ ಉದ್ಘಾಟಿಸುವರು. ವಿವಿಧ ಗಣ್ಯರು, ಧಾರ್ಮಿಕ ಮುಖಂಡರು ಭಾಗವಹಿಸುವರು. ಹಲವರಿಗೆ ಅಭಿನಂದನೆ ನಡೆಯಲಿದೆ.

ಫೆ೩ರಂದು ಗುರುಪುರ ವಜ್ರದೇಹಿ ಮಠದ ರಾಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮೀನುಗಾರಿಕಾ ಸಚಿರ ಅಂಗಾರ ಉದ್ಘಾಟಿಸುವರು. ಫೆ ೪ರಂದು ಕೇರಳ ವರ್ಕಳ ಶಿವಗಿರಿ ಮಠದ ಸತ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವರಾದ ಸುನಿಲ್‌ಕುಮಾರ್‌ಸಮಾರಂಭ ಉದ್ಘಾಟಿಸುವರು. ಮೂಡಬಿದರೆಯ ಡಾ. ಮೋಹನ್‌ಆಳ್ವ, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು ಸಭೆಯಲ್ಲಿ ಭಾಗವಹಿಸುವರು ಎಂದು ಬಜಗೋಳಿ ರವೀಂದ್ರ ಶೆಟ್ಟಿ ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದ ಆಡಳಿತ ಮೋಕ್ತೇಸರ ಸುಕುಮಾರ್‌ಮೋಹನ್‌, ಮುದ್ರಾಡಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ್ ಹೆಗ್ಡೆ ಹಾಜರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.