



ಕಾರ್ಕಳ : ಯಕ್ಷಗಾನದ ಹಿರಿಯ ಕಲಾವಿದ ಮುಳಿಯಾಲ ಭೀಮ ಭಟ್ (೮೫ವ.) ಜ. ೨೫ರಂದು ಅಸ್ತಂಗತರಾದರು.ಕಳೆದ ನಾಲ್ಕು ತಿಂಗಳಿನಿAದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜ.೨೫ ರಂದು ಮುಂಜಾನೆ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಹೃದಯಘಾತದಿಂದ ಕೊನೆಯುಸಿರೆಳೆದರು. ೧೯೩೭ ರ ವಿಟ್ಲದಲ್ಲಿ ಜನಿಸಿದ ಭೀಮ ಭಟ್ , ೧೯೫೧ರಲ್ಲಿ ಶ್ರೀ ಧರ್ಮಸ್ಥಳ ಮೇಳದಿಂದ ಕಲಾ ಜೀವನ ಆರಂಭಿಸಿದ್ದರು. ಬಾಲ್ಯದಲ್ಲಿಯೆ ಕುರಿಯ ವಿಠಲ ಶಾಸ್ರಿಗಳ ಶಿಶ್ಯರಾಗಿ ಪಳಗಿದ ಭೀಮ ಭಟ್ , ಬಾಲಗೋಪಾಲ, ವೀರ ಅಭೀಮನ್ಯು ಪಾತ್ರಗಳ ಮೂಲಕ ಯಕ್ಷಗಾನಕ್ಕೆÀ ಜೀವ ತುಂಬಿದ ಅವರು ಸುಂಕದ ಕಟ್ಟೆ ಪುತ್ತೂರು ಮೇಳಗಳಲ್ಲಿ ಅತಿಕಾಯ ದಂತಹ ಪೌರಾಣಿಕ ಪ್ರಸಂಗಗಳ ರಾಜವೇಶ ಮೂಲಕ ಜನರ ಮೆಚ್ಚುಗೆಗೆ ಭಾಜನರಾಗಿದ್ದರು. ೧೯೫೮ರಲ್ಲಿ ಕಟೀಲು ಮೇಳದಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಸ್ರೀವೇ಼಼಼ಷದ ಶ್ರೀದೇವಿ ಪ್ರಧಾನ ಪಾತ್ರಧಾರಿಯಾಗಿ ದೇವಿಭಟ್ ಎಂದೆ ಹೆಸರುವಾಸಿಯಾದರು ತೆಂಕುತಿಟ್ಟಿನ ಯಕ್ಷಗಾನದಲ್ಲಿ ಸಾಧನೆ ಮಾಡಿದ್ದ ಅವರು ೧೯೯೧ ರಲಿ ಬಂಟ್ವಾಳದಲ್ಲಿ ನಡೆದ ಅಫಘಾತದ ಬಳಿಕ ಯಕ್ಷ ಪಯಣವು ಕೊನೆಗೊಳಿಸಬೇಕಾಯಿತು . ಬಳಿಕ ಸುಮಾರು ೨೨ ಸುಂಕದಕಟ್ಟೆ ದೇವಸ್ಥಾನದಲ್ಲಿ ಹಾಗು ಕಾರ್ಕಳದ ಕಾಂತಾವರ ದೇವಾಲಯದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತಿದ್ದರು.ಓರ್ವ ಪುತ್ರಿಯನ್ನು ಅಗಲಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.