



ಮಲ್ಪೆ: ಕಾಣಿಕೆ ಡಬ್ಬಿ ಒಡೆದು ಹಣ ಕಳವು ಮಲ್ಪೆ: ಇಲ್ಲಿನ ಬಿಲ್ಲವರ ಸಮಾಜ ಸೇವಾ ಸಂಘದ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳನೋರ್ವ ಎರಡು ಕಾಣಿಕೆ ಡಬ್ಬಿಗಳನ್ನು ಒಡೆದು ಅದರಲ್ಲಿದ್ದ ಹಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.
ಜ.28ರಂದು ನಸುಕಿನ ವೇಳೆ ಮಲ್ಪೆ ಬಿಲ್ಲವರ ಸಮಾಜ ಸೇವಾ ಸಂಘದ ಬಾಗಿಲು ಮುರಿದು ಮಂದಿರದ ಒಳಪ್ರವೇಶಿಸಿದ ಕಳ್ಳನೊಬ್ಬ ಎರಡು ಕಾಣಿಕೆ ಹುಂಡಿಗಳನ್ನು ಒಡೆದು ಅದರಲ್ಲಿದ್ದ ಹಣವನ್ನು ಕಳವು ಮಾಡಿರುವ ದೃಶ್ಯ ಮಂದಿರದ cctv ಯಲ್ಲಿ ದಾಖಲಾಗಿದೆ. ಇದೇ ವ್ಯಕ್ತಿಯು ಕಳೆದ ವರ್ಷಾವೂ ಇಂತಹದ್ದೇ ಕೃತ್ಯ ನಡೆಸಿದ್ದಾನೆ. ಸಾರ್ವಜನಿಕರು ಈತನ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಮಲ್ಪೆ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ಸಂಖ್ಯೆ 98451 28616 ಸಂಪರ್ಕಿಸುವಂತೆ ಕೋರಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.