



ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಕುದ್ರೊಟ್ಟುವಿನ ಪಾಲ್ದಡಿ ಎಂಬಲ್ಲಿ ನಿನ್ನೆ ಸಂಜೆ ಕೃಷಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದೆ.
ತೆಂಗು, ಹಲಸು, ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿದ್ದು, ಬೈಹುಲ್ಲಿನ ಬೃಹತ್ ರಾಶಿಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೃಷಿ ತೋಟಕ್ಕೆ ಬಳಸುತ್ತಿದ್ದ ಪಂಪ್‌ಶೆಡ್ ಕೂಡ ಸುಟ್ಟು ಕರಕಲಾಗಿದೆ. ಬೆಂಕಿ ಬಿದ್ದ ಜಾಗದಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದು ಅವುಗಳನ್ನು ಸ್ಥಳಿಯರು ರಕ್ಷಿಸಿದ್ದಾರೆ.
ಕೃಷಿ ತೋಟಕ್ಕೆ ಬೆಂಕಿ ಬಿದ್ದ ಸಂದರ್ಭ ಸ್ಥಳೀಯರು ಕಾರ್ಕಳ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಸಂಪರ್ಕಿಸಿದಾಗ ಸರಿಯಾದ ಸ್ಪಂದನೆ ಸಿಕ್ಕಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಕಾರ್ಕಳದ ಅಗ್ನಿಶಾಮಕ ಸಿಬ್ಬಂದಿ ನಮ್ಮಲ್ಲಿರುವ ಎರಡೂ ವಾಹನಗಳು ಬೇರೆ ಕಡೆ ಹೋಗಿವೆ ಮೂಡುಬಿದ್ರೆಯ ಅಗ್ನಿಶಾಮಕ ದಳವರನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ. ಮೂಡಬಿದ್ರೆಗೆ ಸಂಪರ್ಕಿಸಿದಾಗ, ನಮ್ಮ ವಾಹನಗಳು ನೀರನ್ನು ತುಂಬಿಸಲು ಹೋಗಿದೆ ಎಂದು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಮಾರು 2-3 ಎಕರೆಯಷ್ಟು ಜಮೀನಿಗೆ ಬೆಂಕಿ ಬಿದ್ದು ಸುಟ್ಟು ಹೋದರೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರದೇ ಸ್ಥಳೀಯರೇ ಸೇರಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಬೆಂಕಿಯಿAದಾದ ಅಪಾರ ಪ್ರಮಾಣದ ನಷ್ಟಕ್ಕೆ ಅಗ್ನಿಶಾಮಕ ದಳದವರ ನಿರ್ಲಕ್ಷ್ಯ ವೇ ಕಾರಣ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.