



ಕಾರ್ಕಳ: ಮುನಿಯಾಲು ಇಲ್ಲಿನ ಪ್ರೌಢಶಾಲಾ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಒಂದು ದಿನದ ಆಧುನಿಕ ಕೃಷಿ ಅಧ್ಯಯನ ಶಿಬಿರವು ಇತ್ತೀಚೆಗೆ ನಡೆಯಿತು ರಂದು ಶಿರ್ಲಾಲು ಶ್ರೀ ಗುಣಪಾಲ ಕಡಂಬ ಅವರ ಕೃಷಿ ಕ್ಷೇತ್ರದಲ್ಲಿ ನಡೆಯಿತು.ಹಿರಿಯ ಕೃಷಿ ಸಾಧಕ ಶ್ರೀ ಗುಣಪಾಲ ಕಡಂಬ ಅವರು ತಮ್ಮ ಕೃಷಿ ಕ್ಷೇತ್ರದಲ್ಲಿ ಅಳವಡಿಸಿರುವ ಮಿಶ್ರ ಕೃಷಿಯ ಬೆಳೆಗಳಾದ ಅಡಿಕೆ,ತೆಂಗು, ಬಾಳೆ, ಜಾಯಿಕಾಯಿ,ಕಾಳು ಮೆಣಸು,ಗುಣಮಟ್ಟದ ಗಿಡಗಳನ್ನು ಬೆಳೆಸುವ ನರ್ಸರಿ, ಸ್ಥಳೀಯವಾಗಿ ತಾವೇ ಅಭಿವೃದ್ಧಿಸಿದ ವಿಶಿಷ್ಟ ಹನಿ ನೀರಾವರಿ ಪಧ್ಧತಿ,ಜಾಯಿಕಾಯಿ ಒಣಗಿಸುವ ನವೀನ ಡ್ರಯ್ಯರ್, ಗುಣಮಟ್ಟದ ಒಣ ಅಡಿಕೆ ತಯಾರಿಸುವ ಸೋಲಾರ್ ಟೆಂಟ್ ಗಳು, ಅಂತರ್ಜಲದ ಮಟ್ಟ ಹೆಚ್ಚಿಸುವ ಬೃಹತ್ ಕೃಷಿ ಹೊಂಡಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಅಲ್ಲದೆ ಆಧುನಿಕ ರಬ್ಬರ್ ಕೃಷಿ, ಸುಧಾರಿತ ತಳಿಯ ಮಾವು, ರಂಟಾನ್ , ಜಮ್ಮು ನೇರಳೆ,ಪಪ್ಪಾಯ,ಪೇರಲ ಮುಂತಾದ ಹಣ್ಣು ಹಂಪಲು ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ವೈಜ್ಞಾನಿಕ ವಿಧಾನಗಳ ಅಳವಡಿಕೆ,ಸುಧಾರಿತ ಜನಕ ಉಪಯೋಗ, ಯಾಂತ್ರೀಕರಣ ಮತ್ತು ನೀರು ಹಾಗೂ ಕಾರ್ಮಿಕರು ವ್ಯವಸ್ಥಿತ ನಿರ್ವಹಣೆಯಿಂದ ಕೃಷಿಯೂ ಕೂಡ ಲಾಭದಾಯಕ ಉದ್ಯಮ ವಾಗಲು ಸಾಧ್ಯ ಎಂದು ಗುಣಪಾಲ ಕಡಂಬರು ತಮ ಸ್ವಾನುಭವದ ಮೂಲಕ ಮನವರಿಕೆ ಮಾಡಿದರು. ಶಿಬಿರದಲ್ಲಿ ಸ್ಥಳೀಯ ಉದ್ಯಮಿ ಶ್ರೀ ಶಾಂತಿರಾಜ್ ಜೈನ್,ಶಿರ್ಲಾಲು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ನರಸಿಂಹ ನಾಯಕ್,ಶಿಕ್ಷಕರಾದ ಶ್ರೀ ವಿಶ್ವನಾಥ ನಾಯಕ್,ಬಾಳಪ್ಪ ಶೇಕುಗೋಳ ಮುಂತಾದವರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಶ್ರೀ ಲಕ್ಷ್ಮೀನಾರಾಯಣ ಬೋರ್ಕರ್ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನವ್ಯಾ ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.