logo
WhatsApp Image 2026-04-02 at 14.46.04.jpeg
hindalco everlast.jpeg

ತಿಹಾರ್ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹಚರನ ಕೊಲೆ

ಟ್ರೆಂಡಿಂಗ್
share whatsappshare facebookshare telegram
15 Apr 2023
post image

ನವದೆಹಲಿ: ತಿಹಾರ್ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹಚರನನ್ನು ವಿರೋಧಿ ಗುಂಪಿನ ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ವಿಚಾರಣಾಧೀನ ಕೈದಿಯಾಗಿದ್ದ 33 ವರ್ಷ ವಯಸ್ಸಿನ ಪ್ರಿನ್ಸ್ ತೆವಾಟಿಯಾ, ಹತ್ಯೆಗೀಡಾದ ಕೈದಿ. 380 ಕೈದಿಗಳಿರುವ ನಂ. ಕೇಂದ್ರ ಕಾರಾಗೃಹದ 6ನೇ ವಾರ್ಡ್‌ನಲ್ಲಿ ತೆವಾಟಿಯಾ ಅವರನ್ನು ಇರಿಸಲಾಗಿತ್ತು.

ಶುಕ್ರವಾರ ಸಂಜೆ 5.30ರ ಸುಮಾರಿಗೆ ವಿರೋಧಿ ಗುಂಪಿನ ಅತ್ತತೂರ್ ರೆಹಮಾನ್ ಜತೆ ತೆವಾಟಿಯಾ ಜಗಳ ಮಾಡಿಕೊಂಡಿದ್ದಾರೆ. ಎರಡೂ ಬಣಗಳ ಸದಸ್ಯರು ಘರ್ಷಣೆಯಲ್ಲಿ ತೊಡಗಿದ್ದು, ಈ ಸಂದರ್ಭ ತೆವಾಟಿಯಾ ಅವರ ಮೇಲೆ ಸುಧಾರಿತ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ.

ಗಾಯಗೊಂಡಿದ್ದ ತೆವಾಟಿಯಾ ಮತ್ತು ರೆಹಮಾನ್ ಸೇರಿ ನಾಲ್ವರನ್ನು ದೀನ್ ದಯಾಳ್ ಉಪಾಧ್ಯಾಯ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರ ಸ್ಥಿತಿ ಸ್ಥಿರವಾಗಿದ್ದು, ತೆವಾಟಿಯಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.