



ಮಂಡ್ಯ: ನಾನು ನನ್ನ ಸಂಪೂರ್ಣ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ ಸರ್ಕಾರಕ್ಕೆ ನೀಡುತ್ತೇನೆ ಎಂದು ಸಂಸದೆ ಸುಮಲತಾ ಅಧಿಕೃತವಾಗಿ ಘೋಷಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪಕ್ಷೇತರ ಸದಸ್ಯೆ. ಈ ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ನಾನು ಜಾರಿಗೆ ತಂದಿದ್ದೇನೆ. ಈ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರವೇ ಕಾರಣ. ಈ ಕಾರಣಕ್ಕೆ ನಾನು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನೀಡುತ್ತೇನೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಮಂಡ್ಯದ ಕಲುಷಿತ ರಾಜಕೀಯವನ್ನು ಸ್ವಚ್ಛಗೊಳಿಸಲು ನಾನು ಮೋದಿ ಅವರಿಗೆ ಬೆಂಬಲ ನೀಡುತ್ತೇನೆ. ನನ್ನ ನಿರ್ಧಾರದಲ್ಲಿ ರಿಸ್ಕ್ ಇರಬಹುದು. ಆದರೆ ಜನರ ಅಭಿವೃದ್ಧಿ ಮುಖ್ಯ. ಈ ಕಾರಣಕ್ಕೆ ನಾನು ರಿಸ್ಕ್ ತೆಗೆದುಕೊಂಡು ನಿರ್ಧಾರ ಮಾಡಿದ್ದೇನೆ.
ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ನಾನು ಭಾರತೀಯ ಎಂದು ತಲೆ ಎತ್ತುವಂತೆ ಮೋದಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆದಾಗ ಕೆಆರ್‍ಎಸ್‍ನಲ್ಲಿ ಬಾಗಿನ ಅರ್ಪಿಸಿದ್ದರು. ಅದಕ್ಕೂ ಮೊದಲು ದೆಹಲಿಯಲ್ಲಿ ನನ್ನ ಭೇಟಿ ಮಾಡಿ ಮಂಡ್ಯಗೆ ಏನು ಮಾಡಬೇಕೆಂದು ನನ್ನ ಕೇಳಿದ್ದರು. ಆಗ ಮೈಶುಗರ್ ಕಾರ್ಖಾನೆ ಓಪನ್ ಮಾಡಿಸಿ ಎಂದೆ. ಆಗ ಪರ ವಿರೋಧ ಎಲ್ಲವೂ ಬಂದಿತ್ತು. ಆದರೂ ಯಡಿಯೂರಪ್ಪ ಅವರು ಸುಮಲತಾ ಹೇಳಿದ್ದಾರೆ ಎಂದು ಮೈಶುಗರ್ ಓಪನ್ ಮಾಡಿಸಿದರು. ಬೊಮ್ಮಾಯಿ ಅವರು 50 ಕೋಟಿಯನ್ನು ನೀಡಿದರು. ಈ ಅಭಿವೃದ್ಧಿ ಆಗಿದ್ದು ಬಿಜೆಪಿಯಿಂದ. ನನಗೆ ಬಿಜೆಪಿ ಬೆಂಬಲ ನೀಡಿದೆ. ಅಭಿವೃದ್ಧಿ ಆಗಬೇಕು ಅಂದರೆ ಬಿಜೆಪಿ ಬೇಕು. ಅದಕ್ಕೆ ನಾನು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಎಂದು ತಿಳಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.