



ನನ್ನ ಗ್ರಾಮ : ಕೊಡನವಳ್ಳಿ
ನೇಮಿರಾಜ್ ಜೈನ್ ಪತ್ರಿಕೋದ್ಯಮ ವಿಭಾಗ ಎಂ ಪಿ ಎಂ ಕಾರ್ಕಳ
ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕಂಡು ಬರುವ ಅತಿ ಸುಂದರವಾದ ಗ್ರಾಮ ನನ್ನ ಗ್ರಾಮ ಹೆಸರು ಕೊಡನವಳ್ಳಿ ಅತಿ ವಿಶಾಲವಾದ ಭೂಪ್ರದೇಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಕೃಷಿಯ ಚಟುವಟಿಕೆ ಆಧುರೀಕರಣದ ಕೇಂದ್ರ ಬಿಂದುವಾದ ಮೊಬೈಲ್ ನೆಟ್ವರ್ಕ್ ಅನ್ನು ಕಾಣದ ಒಂದು ಗ್ರಾಮ ಇನ್ನೂ ಹಲವರಿಗೆ ಮೊಬೈಲ್ ನ ಪರಿಚಯವೇ ಇಲ್ಲವಾದರೂ ನನಗೆ ಎಲ್ಲಾ ತಿಳಿದಿದೆ ಎಂಬಂತೆ ಬದುಕುತ್ತಿರುವ ಜನರು ಹಚ್ಚ ಹಸಿರು ಭೂಪದೇಶವನ್ನು ಕಣ್ಣು ತುಂಬಾ ನೋಡಲು ಸಿಗುವುದರ ಜೊತೆಗೆ ಅತಿ ಎತ್ತರದ ಗುಡ್ಡಗಳು ಕಾಡುಗಳು ಇಲ್ಲಿ ಸಿಗುವ ವಿಶೇಷವಾದ ಹಣ್ಣುಗಳು ಅದನ್ನು ಹುಡುಕಲು ಬರುವ ಕೋತಿಗಳು ಆ ಕೋತಿಗಳನ್ನು ಮೀರಿದ ನಮ್ಮ ಗ್ರಾಮದ ಪುಟಾಣಿ ಹೃದಯಗಳು ಇಂತಹ ಸುಂದರ ವಿಷಯಗಳಿಗೆ ಸಾಕ್ಷಿಯಾಗಿರುವ ಪ್ರದೇಶ ನನ್ನ ಗ್ರಾಮ ಕೃಷಿಯನ್ನೇ ನಂಬಿ ಜೀವನ ನಡೆಸುವ ಜನಗಳು ಅತಿಯಾಗಿ ಕಂಡು ಬರುವ ಅಡಿಕೆ ಬೆಳೆ ಮಧ್ಯದಲ್ಲಿ ಕಾಣಲು ಸಿಗುವ ಬಾಳೆ ಏಲಕ್ಕಿ ಕಾಳು ಮೆಣಸುಗಳು ಅತಿಯಾದ ಹಣದ ಆಸೆ ಇಲ್ಲದೆ ಇದರಲ್ಲೇಜೀವನ ನಡೆಸುವುದು ಕುಟುಂಬಗಳು ಅವರುಗಳಿಗೆ ಆಸರೆಯಾಗಿ ಹರಿಯುತ್ತಿರುವ ಶರಾವತಿ ನದಿ ಅದರಿಂದಲೇ ನಡೆಯುತ್ತಿರುವ ಇಲ್ಲಿನ ಜನರ ಜೀವನ ಶೈಲಿ ಎಲ್ಲದಕ್ಕೂ ಇದೊಂದೇ ಆಧಾರ ಹಾಗಾಗಿ ದೇವರ ರೂಪದಲ್ಲಿ ಜನರಿಗೆ ಜೀವನದಿ ದೊರಕಿದೆ
ಇಂತಹ ಸುಂದರ ವಿಷಯಗಳಿಗೆ ಸಾಕ್ಷಿಯಾಗಿ ಇಂತಹ ಉತ್ತಮ ಪ್ರದೇಶದೊಂದಿಗೆ ಜನರ ಜೀವನಕ್ಕೆ ದಾರಿ ಹಾಗೂ ಹಲವಾರು ಧರ್ಮಗಳ ಚರಣಗಳಿದ್ದರೂ ಎಲ್ಲವನ್ನು ಸಮಾನವಾಗಿ ನೋಡುತ್ತಿರುವ ಗ್ರಾಮ ನನ್ನ ಗ್ರಾಮ ಹಾಗಾಗಿ ಇಲ್ಲಿನ ಜನರ ಜೀವನಶೈಲಿ ವಿಶೇಷ ಎಲ್ಲರೂ ಬೇರೆ ಬೇರೆ ಧರ್ಮವಾದರೂ ಎಲ್ಲರೂ ನಮ್ಮವರೇ ಎಂದು ಬದುಕುವ ಗ್ರಾಮವಾಗಿ ಒಂದು ವಿಶೇಷವಾದ ಜಾಗವಾಗಿ ಹೊರಹೊಮ್ಮಿದೆ ಇದಕ್ಕೆಲ್ಲಾ ಕಾರಣ ಅಲ್ಲಿನ ಜನರ ಜೀವನಶೈಲಿ ಅವರ ಒಂದು ಮುಗ್ಧ ಮನಸೇ ಕಾರಣ ಎಂದು ತಿಳಿಯಲೇಬೇಕಾದ ವಿಷಯ ಇದು ನನ್ನ ಗ್ರಾಮದ ಪರಿಚಯ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.