logo
WhatsApp Image 2026-04-02 at 14.46.04.jpeg
hindalco everlast.jpeg

ಮೈಸೂರು ಇನ್ಫೋಸಿಸ್ ಉದ್ಯೋಗಿಗಳಿಗೆ ಚಿರತೆಯಿಂದ ಮಾತ್ರ ವರ್ಕ್ ಫ್ರಂ ಹೋಂ ಸಾಧ್ಯ: ವೈರಲ್ ಆಗ್ತಿದೆ ಚಿರತೆಯ ಟ್ರೋಲ್

ಟ್ರೆಂಡಿಂಗ್
share whatsappshare facebookshare telegram
9 Jan 2025
post image

ಮೈಸೂರಿನ ಹೊರವಲಯದಲ್ಲಿರುವ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಡಿಸೆಂಬರ್‌ 31 ರಂದು ಚಿರತೆ ಕಾಣಿಸಿಕೊಂಡ ಹಿನ್ನೆಲೆ ಸುರಕ್ಷತೆಯ ದೃಷ್ಟಿಯಿಂದ ಇನ್ಫೋಸಿಸ್‌ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಮತ್ತು ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಆದ್ರೆ ಚಿರತೆ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ಸ್‌, ಮೀಮ್ಸ್‌ಗಳು ಕೂಡಾ ಹರಿದಾಡುತ್ತಿದ್ದು, ಇನ್ಫೋಸಿಸ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಕೊಡಲು ಚಿರತೆಯಿಂದ ಮಾತ್ರ ಸಾಧ್ಯ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಕೆಲ ಸಮಯಗಳ ಹಿಂದೆಯಷ್ಟೇ ಇನ್ಫೋಸಿಸ್‌ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಯುವಕರು ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕು ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಈ ಮಾತನ್ನೇ ಮುಂದಿಟ್ಟುಕೊಂಡು ಎಕ್ಸ್‌ ಪೇಜ್‌ ಒಂದರಲ್ಲಿ “ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡ ಚಿರತೆ ಜ್ಯೂನಿಯರ್‌ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದೆ.

ಅದಕ್ಕೂ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಲಾಗಿದೆ” ಎಂದು ಟ್ರೋಲ್‌ ಮಾಡಿದ್ದಾರೆ. ಇನ್ನೊಬ್ಬ ಎಕ್ಸ್‌ ಬಳಕೆದಾರರು ಚಿರತೆಯಿಂದ ಮಾತ್ರ ಇನ್ಫೋಸಿಸ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಕೊಡಲು ಸಾಧ್ಯ ಎಂದು ತಮಾಷೆ ಮಾಡಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.