



ಉನ್ನಾವ್: ಉತ್ತರ ಪ್ರದೇಶದ ಉನ್ನಾವೊದಲ್ಲಿ ಯುವತಿಯೊಬ್ಬಳು ತನ್ನ ಅತ್ತಿಗೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಆಘಾತಕಾರಿ ಘಟನೆ ನಡೆದಿದೆ.
ಸುಮಾರು 6 ತಿಂಗಳಿನಿಂದ ಅವರಿಬ್ಬರ ನಡುವೆ ಆಪ್ತ ಸಂಬಂಧ ಬೆಳೆದಿತ್ತು. ಅದು ಪ್ರೀತಿಗೆ ತಿರುಗಿತ್ತು. ಯುವತಿಗೆ ತನ್ನ ಅತ್ತಿಗೆ ತನ್ನ ಅಣ್ಣನೊಂದಿಗೆ ಆತ್ಮೀಯವಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಅಣ್ಣನನ್ನು ಬಿಟ್ಟು ತನ್ನ ಜೊತೆ ಇರುವಂತೆ ಒತ್ತಾಯಿಸುತ್ತಿದ್ದಳು.
ಅಣ್ಣನನ್ನು ಬಿಟ್ಟು ತನ್ನನ್ನೇ ಮದುವೆಯಾಗಬೇಕೆಂದು ಆಕೆ ಅತ್ತಿಗೆಗೆ ಒತ್ತಾಯಿಸುತ್ತಿದ್ದಳು. ಇಬ್ಬರೂ ಸಲಿಂಗ ವಿವಾಹವಾಗಲು ಮನೆ ಬಿಟ್ಟು ಓಡಿಹೋಗಲು ನಿರ್ಧರಿಸಿದ್ದರು.
ಈ ವಿಷಯ ಮನೆಯಲ್ಲಿ ಗೊತ್ತಾಗಿ ಅವರ ಪ್ರಣಯ ಸಂಬಂಧವು ವಿವಾದಗಳಿಗೆ ಕಾರಣವಾಯಿತು. ನಂತರ ಅತ್ತಿಗೆ ವಿಷ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿವಾಹಿತ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಮತ್ತು ಆಕೆಯ ಕುಟುಂಬದವರು ಚಿಕಿತ್ಸೆಗಾಗಿ ಬಂಗಾರ್‌ಮೌ ಸಿಎಚ್‌ಸಿಗೆ ದಾಖಲಿಸಿದ್ದಾರೆ.
ಐದು ದಿನಗಳ ಹಿಂದೆ, ಯುವತಿ ಮತ್ತು ಆಕೆಯ ಅತ್ತಿಗೆ ಇಬ್ಬರೂ ಪರಾರಿಯಾಗಿದ್ದರು. ಆದರೆ ಪೊಲೀಸರು ಅವರನ್ನು ಪತ್ತೆ ಮಾಡಿ ಅವರ ಕುಟುಂಬಗಳಿಗೆ ಒಪ್ಪಿಸಿದ್ದಾರೆ. ವಿವಾಹಿತ ಮಹಿಳೆಯ ಪತಿ ಆಕೆಯಿಂದ ದೂರವಾಗಿದ್ದ. ಏನೇನೆಲ್ಲ ನಡೆಯುವ ಈ ಜಗದಲ್ಲಿ ಈಗೊಂದು ಸಲಿಂಗಿಗಳ ಕತೆ ಈಗ ಸುದ್ದಿ ಮಾಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.