



ವಾಷಿಂಗ್ಟನ್: ಐತಿಹಾಸಿಕ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಅಮೆರಿಕದ ಜಂಟಿ ಭಾಷಣ ಮಾಡಿದ್ದಾರೆ. ಮೋದಿ ಮಾತಿಗೆ ತಲೆದೂಗಿದ ಅಮೆರಿಕ ಸಂಸದರು ಎದ್ದು ನಿಂತು ಚಪ್ಪಾಳೆ ಹೊಡೆದರು.
ಅಮೆರಿಕ ಜಂಟಿ ಸದನವನ್ನುದ್ದೇಶಿಸಿ ಎರಡನೇ ಬಾರಿ ಭಾಷಣ ಮಾಡಿದ ಮೊದಲ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, ಪ್ರಜಾಪ್ರಭುತ್ವವೆಂಬುದು ನಮ್ಮ ಎರಡು ದೇಶಗಳ ಪವಿತ್ರ ಬಾಂಧವ್ಯಗಳಲ್ಲಿ ಒಂದಾಗಿದೆ, ಘನತೆ ಹಾಗೂ ಸಮಾನತೆಯನ್ನು ಬೆಂಬಲಿಸಲು ಪ್ರಜಾಪ್ರಭುತ್ವವೊಂದೇ ದಾರಿ, ಭಾರತವು ಪ್ರಜಾಪ್ರಭುತ್ವದ ತಾಯಿ ಎಂದರು.
ಆಧುನಿಕ ಭಾರತದಲ್ಲಿ ಮಹಿಳೆಯರು ನಮ್ಮನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಭಾರತದ ದೃಷ್ಟಿ ಕೇವಲ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿಯಲ್ಲ, ಇದು ಮಹಿಳಾ ನೇತೃತ್ವದ ಅಭಿವೃದ್ಧಿ ಎಂದರು. ಆರ್ಥಿಕತೆಯನ್ನು ನಗದುರಹಿತವಾಗಿಸಲು ಭಾರತ ಡಿಜಿಟಲ್ ಕ್ರಾಂತಿ ಮಾಡಿದೆ. ಭಾರತದಲ್ಲಿ ಕೋಟ್ಯಂತರ ಜನರು ಯುಪಿಐ ಮೂಲಕ ತಮ್ಮ ವಹಿವಾಟು ಮಾಡುತ್ತಿದ್ದಾರೆ. ಇದು ಆರ್ಥಿಕತೆಯಲ್ಲಿ ಪಾರದರ್ಶಕತೆಯನ್ನು ತಂದಿದೆ, ಭ್ರಷ್ಟಾಚಾರವನ್ನು ಕೂಡ ಕಡಿಮೆ ಮಾಡಲಾಗಿದೆ ಎಂದರು. ಅಮೆರಿಕದಲ್ಲಿರುವ ಭಾರತೀಯ ಮೂಲದವರ ಬಗ್ಗೆ ಮಾತನಾಡಿದ ಮೋದಿ, ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬಗ್ಗೆ ಹರ್ಷವ್ಯಕ್ತಪಡಿಸಿ, ಇಲ್ಲಿ ಭಾರತೀಯ ಬೇರು ಇರುವ ಅಮೆರಿಕದ ಜನರು ತುಂಬ ಜನ ಇದ್ದಾರೆ. ನನ್ನ ಹಿಂಭಾಗದಲ್ಲಿ ಕುಳಿತಿರುವವರು ಅಮೆರಿಕದಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ ‘ ಎಂದು ಹೇಳಿದರು.
ಮೋದಿ ಭಾಷಣದ ಬಳಿಕ ಅಮೆರಿಕ ಸಂಸದರು ಮತ್ತು ಅನಿವಾಸಿ ಭಾರತೀಯರು ಸೆಲ್ಫಿ ಮತ್ತು ಅಟೋಗ್ರಾಫ್ ಗಾಗಿ ಮುಗಿಬಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.