



ಬೆಂಗಳೂರು: ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರ್ಯಾಂಡ್ ರ‍್ಯಾಂಕಿಂಗ್ನಲ್ಲಿ 2023ನೇ ಸಾಲಿನಲ್ಲಿ ಕರ್ನಾಟಕ ಸಹಕಾರಿ ಹಾಲು ಮಾರಾಟ ಮಹಾಮಂಡಳದ ಡೈರಿ ಬ್ರ್ಯಾಂಡ್ ನಂದಿನಿ ಒಂದು ಸ್ಥಾನ ಮೇಲಕ್ಕೇರಿದೆ.
2022ರಲ್ಲಿ 7ನೇ ಸ್ಥಾನದಲ್ಲಿದ್ದ ನಂದಿನಿ ಬ್ರ್ಯಾಂಡ್ 2023ರಲ್ಲಿ ಒಂದು ಸ್ಥಾನ ಮೇಲೇರಿ 6ರಲ್ಲಿ ಗುರುತಿಸಿಕೊಂಡಿದೆ. ಮತ್ತೊಂದೆಡೆ, 2022 ರಲ್ಲಿ 2ನೇ ಸ್ಥಾನದಲ್ಲಿದ್ದ ಗುಜರಾತಿನ ಅಮುಲ್ 3 ನೇ ಸ್ಥಾನಕ್ಕೆ ಕುಸಿದಿದೆ.
ಬ್ರ್ಯಾಂಡ್ ಫುಟ್ ಪ್ರಿಂಟ್ ಎಂಬ ಬ್ರ್ಯಾಂಡ್ ರ‍್ಯಾಂಕಿಂಗ್ ಪಟ್ಟಿಯನ್ನು ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪಿನ ಕಾಂತಾರ್ ವರ್ಲ್ಡ್‌ಪ್ಯಾನೆಲ್ ಪ್ರಕಟಿಸಿದೆ.
ಈ ಮಧ್ಯೆ, ಕರ್ನಾಟಕದ ಹೈನುಗಾರರಿಗೆ ಅವರ ಶ್ರಮಕ್ಕೆ ಉತ್ತಮ ಆದಾಯ ಖಾತರಿಪಡಿಸಿಕೊಳ್ಳುವ ದೃಷ್ಟಿಯಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ಕೆಎಂಎಫ್ ಮಾರಾಟ ಮಾಡುವ ಹಾಲಿನ ಬೆಲೆಯನ್ನು ಲೀಟರಿಗೆ 3 ರೂ. ಹೆಚ್ಚಿಸಲು ನಿರ್ಧರಿಸಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.