



ಜನ ಮೆಚ್ಚಿದ ನಾಯಕ, ದೇಶದ ಪ್ರಧಾನಿ ನರೇಂದ್ರ ಮೋದಿ ಸತತವಾಗಿ 10 ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದ ಇವರು, ಮೂಲತಃ ಗುಜರಾತ ರಾಜ್ಯದ ಮೆಹಸಾನಾ ಜಿಲ್ಲೆಯ ವಡನಗರದವರು, ಮೋದಿ ಪರಿವಾರದಲ್ಲಿ 4 ಮಕ್ಕಳ ಪೈಕಿ ಮೂರನೆಯವರಾಗಿದ್ದು, 17 ಸೆಪ್ಟೆಂಬರ್ 1950 ರಲ್ಲಿ ಜನಿಸಿದರು.
ಇವರು ಮೋಧ್ ಗಂಛಿ ತೆಲಿ ಜಾತಿಯ ಅತಿ ಬಡ ಕುಟುಂಬದವರಾಗಿದ್ದು ಇವರ ತಂದೆ ದಾಮೋದರ ದಾಸ್ ಮುಲಚಂದ್ ಮೋದಿ ಮತ್ತು ತಾಯಿ ಹೀರಾ ಬೆನ್. ವಾದ್ ನಗರ ರೈಲ್ವೆ ನಿಲ್ದಾಣದಲ್ಲಿ ಒಂದು ಚಹಾದ ಅಂಗಡಿಯನ್ನು ನಡೆಸುತ್ತಿದ್ದ ಸಮಯದಲ್ಲಿ ಮೋದಿಯವರು, ತಂದೆಗೆ ಸಹಾಯ ಮಾಡುತ್ತಿದ್ದರು.
ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದವರು. ಹಾಗೂ 1967ರಲ್ಲಿ ಪ್ರವಾಹ ಪೀಡಿತ ಗುಜರಾತ್ ನ ಜನತೆಯ ಸೇವೆ ಮಾಡಿದ್ದು, ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ನರೇಂದ್ರ ಮೋದಿ ಅವರು ಭಾರತದ 14ನೇ ಪ್ರಧಾನಮಂತ್ರಿಗಳು. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರು 2014ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಎನ್.ಡಿ.ಎ. ಮೈತ್ರಿಕೂಟ) ಪಕ್ಷದಿಂದ ಸ್ಪರ್ಧಿಸಿ ಗೆದ್ದು ಭಾರತದ 14ನೆಯ ಪ್ರಧಾನಮಂತ್ರಿಯಾಗಿದ್ದಾರೆ. ಗುಜರಾತ್ ನ ವಡೋದರ, ಹಾಗೂ ವಾರಣಾಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಪ್ರಸಕ್ತ ವಾರಣಾಸಿಯ ಸಂಸದರಾಗಿದ್ದಾರೆ.
ಮೋದಿ ಅವರು ಭಾರತೀಯ ಜನತಾ ಪಕ್ಷವನ್ನು 2014 ಮತ್ತು 2019 ರ ಸಂಸತ್ತಿನ ಚುನಾವಣೆಗಳಲ್ಲಿ ದಾಖಲೆಯ ಗೆಲುವಿನತ್ತ ಮುನ್ನಡೆಸಿದರು. 1984ರ ಚುನಾವಣೆಯ ನಂತರ ರಾಜಕೀಯ ಪಕ್ಷವೊಂದು ಸಂಪೂರ್ಣ ಬಹುಮತದೊಂದಿಗೆ ಗೆದ್ದಿರುತ್ತದೆ.

ಪ್ರಧಾನ ಮೋದಿಯವರ ನೇತೃತ್ವದಲ್ಲಿ ಭಾರತವು ಬಡತನವನ್ನು ದಾಖಲೆಯ ವೇಗದಲ್ಲಿ ನಿರ್ಮೂಲನೆ ಮಾಡುತ್ತಿದೆ ಎಂದು ಪ್ರಮುಖ ಅಂತಾರಾಷ್ಟ್ರೀಯ ಮಾಧ್ಯಮಗಳು ಗಮನಿಸಿವೆ. ಇದಕ್ಕೆ ಕಾರಣ ಬಡವರ ಪರವಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ನಿರ್ಧಾರಗಳಗಿವೆ.
ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಜಾರಿ ಮಾಡಿ ಬಡವರಿಗೆ ಅನುಕೂಲವಾಗುವಂತೆ ಮಾಡಿದೆ. ಈ ಕಾರ್ಯಕ್ರಮದಡಿಯಲ್ಲಿ 50 ಕೋಟಿ ಬಡ ಮತ್ತು ಮಧ್ಯಮ ವರ್ಗದ ಜನರನ್ನು ತಲುಪಿದೆ. ಬ್ಯಾಂಕ್ ಖಾತೆಗಳನ್ನು ತೆರೆಯಲು ಪ್ರಧಾನ ಮಂತ್ರಿ ಜನಧನ್ ಯೋಜನೆಗೆ ಚಾಲನೆ ನೀಡಿದರು. ಇಲ್ಲಿಯವರೆಗೆ 35 ಕೋಟಿಗೂ ಹೆಚ್ಚು ಜನಧನ್ ಖಾತೆಗಳನ್ನು ತೆರೆಯಲಾಗಿದೆ. ಬಡ ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲು 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಲಾಯಿತು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂಬ ಕಾರ್ಯಕ್ರಮವನ್ನು 24 ಫೆಬ್ರವರಿ 2019 ರಂದು ಘೋಷಣೆಯಾದ ಮೂರು ವಾರಗಳಲ್ಲಿ ಪ್ರಾರಂಭಿಸಲಾಯಿತು. ಕಾರ್ಯಕ್ರಮ ಆರಂಭವಾದಾಗಿನಿಂದ ರೈತರಿಗೆ ಕಂತುಗಳು ನಿಯಮಿತವಾಗಿ ತಲುಪುತ್ತಿವೆ.
ಪ್ರಧಾನಿಯವರು ಅಕ್ಟೋಬರ್ 2 ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದು ದೇಶಾದ್ಯಂತ ಸ್ವಚ್ಛತೆಯನ್ನು ಕಾಪಾಡುವ ಒಂದು ಜನಾಂದೋಲನವಾದ "ಸ್ವಚ್ಛ ಭಾರತ್ ಮಿಷನ್" ಅನ್ನು ಪ್ರಾರಂಭಿಸಿದರು. ಈ ಚಳವಳಿಯ ಪ್ರಭಾವ ಮತ್ತು ವ್ಯಾಪ್ತಿ ಇತಿಹಾಸವಾಯಿತು.
ಭಾರತ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಉತ್ಪಾದನಾ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಪರಿಚಯವು ಭಾರಿ ಬದಲಾವಣೆಗಳನ್ನು ಕಂಡಿದೆ.
ಭಾರತವು ಸೂಚ್ಯಂಕದ ಪ್ರಕಾರ 2014 ರಲ್ಲಿ 142 ನೇ ಸ್ಥಾನದಿಂದ 2019 ರಲ್ಲಿ 77 ನೇ ಸ್ಥಾನಕ್ಕೆ ಏರಿತು. 2017 ರಲ್ಲಿ, ಭಾರತ ಸರ್ಕಾರವು ಐತಿಹಾಸಿಕ ಸಂಸತ್ತಿನ ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಿತು. ಒಂದು ರಾಷ್ಟ್ರ, ಒಂದೇ ತೆರಿಗೆ ಎಂಬ ಬಹುಕಾಲದ ಕನಸು ನನಸಾಗಿದೆ.
ಭಾರತ ಏಕತೆಯ ಪ್ರತಿಮೆಗಾಗಿ, ಸರ್ದಾರ್ ಪಟೇಲ್ ಅವರ ಕೊಡುಗೆಗಳನ್ನು ವೈಭವೀಕರಿಸಲು ವಿಶ್ವದ ಅತಿದೊಡ್ಡ ಎತ್ತರದ ಕಲ್ಲಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಯಿತು. ಈ ಪ್ರತಿಮೆಯನ್ನು ವಿಶೇಷ ಜನಾಂದೋಲನದ ಮೂಲಕ ನಿರ್ಮಿಸಲಾಗಿದೆ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ದ ಚೈತನ್ಯವನ್ನು ಸಂಕೇತಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಿಸರ ಸಂರಕ್ಷಣೆಗಾಗಿ ಅವರ ಪ್ರಯತ್ನಗಳನ್ನು ಗುರುತಿಸಿ, ವಿಶ್ವಸಂಸ್ಥೆಯು ‘ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ’ ನೀಡಿ ಗೌರವಿಸಿದರು.
ವಿಶ್ವದಲ್ಲಿಯೆ ಭಾರತ ದೇಶಕ್ಕೆ ಜಾಗತಿಕವಾಗಿ ಅತ್ಯುನ್ನತ ಸ್ಥಾನಮಾನವಿದೆ ಎಂದು ಗುರುತಿಸಿಕೊಳ್ಳಲು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅತ್ಯಂತ ಸಧೃಡ ಹಾಗೂ ಬಲಿಷ್ಠ “ ವಿದೇಶಾಂಗ ನೀತಿಗಳು ” ಕಾರಣವಾದವು. “ಸಾರ್ಕ್ (SAARC)” ದೇಶಗಳ ಮುಖ್ಯಸ್ಥರ ಸಮ್ಮುಖದಲ್ಲೇ ಅವರು ಪ್ರಪ್ರಥಮವಾಗಿ ತಮ್ಮ ಕಚೇರಿ ಕೆಲಸಗಳನ್ನು ಪ್ರಾರಂಭಿಸಿದರು.
ವಿಶ್ವ ಮಟ್ಟದಲ್ಲಿ ಒಂದು ದಿನವನ್ನು “ಅಂತರಾಷ್ಟ್ರೀಯ ಯೋಗ ದಿನ”ವಾಗಿ ಆಚರಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ವಿಶ್ವಸಂಸ್ಥೆಗೆ ಸಕಾರಾತ್ಮಕ ಸ್ಪಂದನೆಗಳು ಪ್ರವಾಹೋಪಾದಿಯಲ್ಲಿ ಬಂದಿವೆ.
ಇವರು ಪ್ರಾರಂಭಿಕ ವರ್ಷಗಳಲ್ಲಿ ರಾಷ್ಟ್ರೀಯತೆಯ ಸಾಮಾಜಿಕ ಸಂಸ್ಥೆ “ರಾಷ್ಟ್ರೀಯ ಸ್ವಯಂಸೇವಕ ಸಂಘ ( RSS) “ದ ಚಟುವಟಿಕೆಗಳಲ್ಲಿ ತಲ್ಲೀನರಾಗಿ, ದೇಶ ನಿರ್ಮಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡರು. ಅತ್ಯಂತ “ಟೆಕ್ನೋ ಸೇವಿ ” ನಾಯಕ ಎಂದೇ ಅವರನ್ನು ಗುರುತಿಸಲಾಗುತ್ತಿದೆ.
ಜನರ ಜೀವನದಲ್ಲಿ ಬದಲಾವಣೆ ತರಲು ದೇಶದಾದ್ಯಂತ ಜನರನ್ನು ನೇರವಾಗಿ ಸಂಪರ್ಕಿಸಲು ಇವರು “ವೆಬ್” ಬಳಸುತ್ತಾರೆ. ಫೇಸ್ ಬುಕ್, ಟ್ವೀಟರ್, ಗೂಗ್ಲ್ +, ಇನಸ್ಟಾಗ್ರಾಮ್, ಸೌಂಡ್ ಕ್ಲೌಡ್, ಲಿಂಕೆಡಿನ್, ವೈಬೊ ಮತ್ತು ಇತರ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ಸಕ್ರಿಯರಾಗಿದ್ದರು.

ಶ್ರೀ ನರೇಂದ್ರ ಮೋದಿಯವರು ರಾಜಕಾರಣದ ಹೊರತಾಗಿ ವಿಶೇಷ ಆಸಕ್ತಿ ಹೊಂದಿರುವ ಇನ್ನೊಂದು ಕ್ಷೇತ್ರವೆಂದರೆ, ಅದು ಬರವಣಿಗೆ. ಅವರು ಕವನ ಸಂಕಲನಗಳೂ ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದಾರೆ. ಅವರ ದಿನಚರಿ ಯೋಗಾಭ್ಯಾಸದೊಂದಿಗೆ ಪ್ರಾರಂಭವಾಗುತ್ತದೆ. ಇದು ಅವರ ಬಿಡುವಿಲ್ಲದ ದಿನಚರಿಯಲ್ಲಿ ಅವರ ದೇಹ ಮತ್ತು ಮನಸ್ಸನ್ನು ಶಾಂತಿಯ ಶಕ್ತಿಯನ್ನು ತುಂಬುತ್ತದೆ.
ಇವರು ಕಂಡಂತಹ ಭಾರತ ದೇಶ, ದೇಶಕ್ಕಾಗಿ ಪಟ್ಟ ಪರಿಶ್ರಮ, ಪ್ರಯತ್ನಗಳು, ಕೊಟ್ಟಂತಹ ಕೊಡುಗೆಗಳು ಅಪಾರ. ತನ್ನ ಬದುಕನ್ನು ಸಮಾಜಕ್ಕೆ ಸಮರ್ಪಿಸಿದ ಭಾರತದ ಹಿರಿಮೆಯನ್ನು ಜಗತ್ತಿಗೆ ಪಸರಿಸಿ, ದೇಶದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಇಂದು ನಮ್ಮ ನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 73ನೇ ಹುಟ್ಟುಹಬ್ಬದ ದಿನವಾಗಿದೆ. ನಮ್ಮೆಲ್ಲರ ಪರವಾಗಿ ನಿಮಗಿದು ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು..
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.