



ಉಡುಪಿ:
ಕೊಬೋಡೊ ಬುಡೊಕಾನ್ ಕರಾಟೆ ಅಸೋಸಿಯೇಷನ್ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಉಡುಪಿ ಒಳಕಾಡು ಶಾಲೆಯ 8ನೇಯ ತರಗತಿಯ ವಿದ್ಯಾರ್ಥಿನಿ ಕೀಳಂಜೆಯ ರಿಯಾ ಜಿ.ಶೆಟ್ಟಿ ಅವರು ಕಟ ಮತ್ತು ಕುಮಿಟೆ ವಿಭಾಗದಲ್ಲಿ ಅವಳಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಸಾಧನೆ ಜೊತೆಗೆ ರಾಷ್ಟ್ರಮಟ್ಟದಲ್ಲಿ ನಡೆದಿರುವ ಸತತ ನಾಲ್ಕನೇ ಕರಾಟೆ ಸ್ಪರ್ಧೆಯಲ್ಲಿ ಎರಡು ವಿಭಾಗದಲ್ಲಿಯೂ ಅವಳಿ ಚಿನ್ನ ಬಾಚಿಕೊಂಡ ಸಾಧನೆ ಮಾಡಿದ್ದಾರೆ. ಇವರು ಹಾವಂಜೆ ಗ್ರಾಮದ ಕೀಳಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಕೀಳಂಜೆ ಹಾಗೂ ಜಯಲಕ್ಷ್ಮಿ ಜಿ. ಶೆಟ್ಟಿ ಅವರ ಪುತ್ರಿ. ಅಂತಾರಾಷ್ಟ್ರೀಯ ಕರಾಟೆಪಟು ಶಿಕ್ಷಕಿ, ಪ್ರವೀಣ ಪರ್ಕಳ ಅವರ ಶಿಷ್ಯೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.