



ಕಾರ್ಕಳ: ಸ್ಥಳೀಯ ಹಲಸು ಹಾಳಾಗದಂತೆ ತಡೆಯಲು ಬೆಳೆಗಾರರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರವು ಹಲಸು ಸಂಸ್ಕರಣ ಘಟಕವನ್ನು ಸ್ಥಾಪಿಸಲು ಪ್ರೊತ್ಸಾಹ ನೀಡುತಿದ್ದು ಅದಕ್ಕಾಗಿ ಕೃಷಿ ಸಚಿವಾಲಯದಿಂದ ೫ ಕೋಟಿ ರೂ ಬಿಡುಗಡೆಗೊಂಡಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಮೇ ೨೦ರಿಂದ ೨೨ರ ತನಕ ಆಯೋಜಿಸಿದ ರಾಷ್ಟ್ರೀಯ ಹಲಸು ಮೇಳ ಮತ್ತು ನಿಟ್ಟೆ ಗ್ರಾಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಲಸು ಔಷಧೀಯ ಗುಣವಿದ್ದು ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪರಿಣಾಮಕಾರಿಯಾಗಿದೆ .ಹಲಸು ಕಲ್ಪವೃಕ್ಷದಂತೆ ಉತ್ತಮ ಬೆಳೆಯಾಗಿದೆ . ಅದರಂತೆಯೆ ಧಾರ್ಮಿಕವಾಗಿ ಎಲ್ಲಡೆ ಪೂಜಿಸಲ್ಪಡುತ್ತಿದೆ . ರಾಜ್ಯದಲ್ಲಿಯು ಹಲಸನ್ನು ರಾಜ್ಯ ಬೆಳೆಯಾಗಿ ಘೋಶಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು
ನಿಟ್ಟೆ ಎ.ಐ.ಸಿ. ಇಂಕ್ಯುಬೇಶನ್ ಸೆಂಟರ್‌ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಎ.ಪಿ.ಆಚಾರ್ ಮಾತನಾಡಿ,ದೇಶದ ವಿವಿಧ ರಾಜ್ಯಗಳಲ್ಲಿ ಹಲಸನ್ನು ಬೆಳೆಯುತಿದ್ದು . ಒರಿಸ್ಸಾ ಅಗ್ರಸ್ಥಾನದಲ್ಲಿದೆ ವಿವಿಧ ರಾಜ್ಯಗಳು ಹಲಸನ್ನು ರಾಜ್ಯಬೆಳೆಯಾಗಿ ಘೋಶಿಸುವ ಮೂಲಕ ಹಲಸಿಗೆ ಉತ್ತೇಜನ ನೀಡುತ್ತಿವೆ . ರಾಜ್ಯವು ಹಲಸು ಬೆಳೆ ಬೆಳೆಯುವಲ್ಲಿ ನಾಲ್ಕನೆ ಸ್ಥಾನ ಪಡೆದಿದೆ. ಅದಕ್ಕಾಗಿ ರಾಜ್ಯದಲ್ಲಿಯೆ ಮೊದಲ ಹಲಸು ಸಂಸ್ಕರಣ ಘಟಕ ನಿಟ್ಟೆಯಲ್ಲಿ ಸ್ಥಾಪನೆಯಾಗುತ್ತಿರುವುದು ಸಂತಸತAದಿದೆ ಎಂದು ಹರ್ಷ ವ್ಯಕ್ತಪಡಿಸಿದರು ಗುರ್ಮೆ ಫೌಂಡೇಶನ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು , ನಿಟ್ಟೆ ವಿದ್ಯಾ ಸಂಸ್ಥೆಯ ಅಶೋಕ್ ಅಡ್ಯಂತಾಯ , ಮುಖ್ಯ ಅತಿಥಿಯಾಗಿ ನಿಟ್ಟೆ ಇಂಜಿನಿಯರಿಂಗ್ಕಾಲೇಜಿನ ಪ್ರಾಂಶುಪಾಲ ನಿರಂಜನ್ ಚಿಪ್ಲೂಣ್ಕರ್, , ಕಲ್ಲುಗಣಿ ಮಾಲಕರ ಸಂಘದ ರಾಜ್ಯ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್, ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಕರ್ನಾಟಕ ಬ್ಯಾಂಕ್‌ನ ಅರುಣ್, ಪ್ರಕಾಶ್ ಡಿಸೋಜಾ ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಶ್ಮಿ ಪ್ರಾರ್ಥನೆಗೈದರು. ಸುಫಲ ಫಾರ್ಮ್ ಅಧ್ಯಕ್ಷ ನವೀನ್ ನಾಯಕ್ ಸ್ವಾಗತಿಸಿದರು. ರೇಷ್ಮಾ ಶೆಟ್ಟಿ ಧನ್ಯವಾದವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.