logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳ ಉತ್ಸವದ ಅಂಗವಾಗಿ ರಾಷ್ಟಿಯ ವಿಚಾರ ಸಂಕಿರಣ

ಟ್ರೆಂಡಿಂಗ್
share whatsappshare facebookshare telegram
9 Mar 2022
post image

ಕಾರ್ಕಳ ಉತ್ಸವದ ಅಂಗವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಜಂಟಿ ಆಶ್ರಯದಲ್ಲಿ 11 ಮತ್ತು 12ರಂದು ಶ್ರೀಭುವನೇಂದ್ರ ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟಿçÃಯ ವಿಚಾರ ಸಂಕಿರಣ ನಡೆಯಲಿದೆ. ದಿನಾಂಕ 11ರಂದು ವಿಚಾರಸಂಕಿರಣವನ್ನು ಕಾರ್ಕಳ ಉತ್ಸವದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ ವಸಂತಕುಮಾರ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ.ಎನ್ ಹಾಗೂ ಸದಸ್ಯ ಸಂಚಾಲಕರಾದ ಡಾ. ಬಿ.ಎಂ. ಶರಭೇಂದ್ರಸ್ವಾಮಿ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಎ.ಶಿವಾನಂದ ಪೈ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್. ಎ ಕೋಟ್ಯಾನ್ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು. ಅಂದಿನ ಮೊದಲ ಗೋಷ್ಠಿಯಲ್ಲಿ ಕಾರ್ಕಳ ಇತಿಹಾಸ ಸಾಹಿತ್ಯ, ಸಂಸ್ಕೃತಿ ವಿಚಾರದ ಮೇಲೆ ಖ್ಯಾತ ಇತಿಹಾಸ ವಿದ್ವಾಂಸರಾದ ಪುಂಡಿಕಾÊ ಗಣಪತಿ ಭಟ್, ಮೂಡಬಿದಿರೆ ಇವರು ಮಾತನಾಡಲಿದ್ದಾರೆ. ಮುಂದೆ 'ಹಳೆಗನ್ನಡ ಸಾಹಿತ್ಯ : ದೇಸಿ-ಮಾರ್ಗ ಸಮನ್ವಯ' ಎಂಬ ಎರಡನೇ ಗೋಷ್ಠಿಯಲ್ಲಿ 'ಪಂಪ ಕವಿವರೆಗಿನ ಚಿಂತನೆಗಳು' ಎಂಬ ವಿಷಯದ ಮೇಲೆ ಡಾ. ಗುರುಪಾದ ಮರಿಗುದ್ದಿ, ಬೆಳಗಾವಿ ಹಾಗೂ 'ಪಂಪಕವಿಯ ಅನಂತರದ ಚಿಂತನೆಗಳು' ಎಂಬ ವಿಷಯದಲ್ಲಿ ರಟ್ಟೆಹಳ್ಳಿಯ ಡಾ. ಚಾಮರಾಜ ಅವರು ಮಾತನಾಡಲಿದ್ದಾರೆ. ಮುಂದೆ ನಡೆಯುವ 'ಮಧ್ಯಕಾಲೀನ ಕನ್ನಡ ಸಾಹಿತ್ಯ: ಭಕ್ತಿ- ವೈಚಾರಿಕತೆ ಸಮನ್ವಯ' ಎಂಬ ಮೂರನೇ ಗೋಷ್ಠಿಯಲ್ಲಿ ' ಶರಣರು ಮತ್ತು ದಾಸರ ಚಿಂತನೆ'ಗಳ ಕುರಿತು ಡಾ. ಕುಮಾರ ಚಲ್ಯ, ಶಂಕರ ಘಟ್ಟ, 'ರಗಳೆ ಮತ್ತು ಕಾವ್ಯಗಳಲ್ಲಿರುವ ಚಿಂತನೆ'ಗಳ ಕುರಿತು ಡಾ.ಬಿ.ಗಂಗಾಧರ, ಬೆಂಗಳೂರು ಅವರು ಮಾತನಾಡಲಿದ್ದಾರೆ. ದಿನಾಂಕ 12 ರಂದು ಬೆಳಿಗ್ಗೆ 'ಹೊಸಗನ್ನಡ ಸಾಹಿತ್ಯ : ರಾಷ್ಟಿçÃಯತೆ ಮತ್ತು ವೈಶ್ವಿಕತೆ ಸಮನ್ವಯ' ಎಂಬ ಗೋಷ್ಠಿ 4 ರಲ್ಲಿ 'ಸ್ವಾತಂತ್ರö್ಯಪೂರ್ವ ಚಿಂತನೆ'ಗಳ ಕುರಿತು ಡಾ.ನಿಂಗಪ್ಪ ಮುದೆನೂರು, ಧಾರವಾಡ ಹಾಗೂ 'ಸ್ವಾತಂತ್ರೊö್ಯÃತ್ತರ ಚಿಂತನೆ'ಗಳ ಕುರಿತು ಡಾ. ಶುಭಾ ಮರವಂತೆ, ಶಿವಮೊಗ್ಗ ಅವರು ಮಾತನಾಡುತ್ತಾರೆ. ನಂತರ ನಡೆಯುವ ' ಕನ್ನಡ ಜನಪದ ಮತ್ತು ತತ್ವಪದ ಸಾಹಿತ್ಯ: ಅನುಭವ-ಅನುಭಾವ ಸಮನ್ವಯ' ಕುರಿತ ಗೋಷ್ಠಿಯಲ್ಲಿ 'ಜನಪದರ ಚಿಂತನೆ'ಗಳ ಕುರಿತು ಡಾ. ಮೈಸೂರು ಉಮೇಶ್, ಮೈಸೂರು ಹಾಗೂ 'ತತ್ವಪದಕಾರರ ಚಿಂತನೆ'ಗಳ ಕುರಿತು ಡಾ. ಚೆನ್ನಬಸವಯ್ಯ ಹಿರೇಮಠ, ರಾಯಚೂರು ಮಾತನಾಡಲಿದ್ದಾರೆ. ಆ ದಿನದ ಆರನೆಯ ಗೋಷ್ಠಿ ಪ್ರಬಂಧ ಮಂಡನಾ ಗೋಷ್ಠಿಗಳಾಗಿದ್ದು, ರಾಜ್ಯದ ಹಲವಾರು ಸಂಶೋಧಕರು, ಉಪನ್ಯಾಸಕರುಗಳು ಭಾಗವಹಿಸಲಿದ್ದು ಈ ಗೋಷ್ಠಿ ಎರಡು ಸಮಾನಾಂತರ ವೇದಿಕೆಗಳಲ್ಲಿ ನಡೆಯಲಿವೆ. ಇವುಗಳಿಗೆ ಕ್ರಮವಾಗಿ ಡಾ. ಅರುಣಕುಮಾರ್ ಎಸ್. ಆರ್, ಕಾರ್ಕಳ ಹಾಗೂ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ , ಕಾರ್ಕಳ ಇವರುಗಳು ಅಧ್ಯಕ್ಷತೆ ವಹಿಸಲಿದ್ದಾರೆ. ವಿಚಾರ ಸಂಕಿರಣದ ಸಮಾರೋಪ ಡಾ. ಬಿ.ವಿ ವಸಂತಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅವರು ಸಮಾರೋಪ ನುಡಿಯನ್ನಾಡಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್.ಎ.ಕೋಟ್ಯಾನ್ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ. ಅರುಣಕುಮಾರ ಎಸ್. ಆರ್ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಶರಭೇಂದ್ರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.